ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಫ್ಲೈಓವರ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಸುಮಾರು 320 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೇನು ಕಾಮಗಾರಿ ಆರಂಭವಾಗಲಿದೆ ಎನ್ನುವ ಕುರಿತು ಅಧಿಕಾರಿಗಳು ಸಹ ಸ್ಪಷ್ಟಪಡಿಸಿದ್ದಾರೆ. ಆದರೆ, ಗದಗ ರಸ್ತೆಯಲ್ಲಿ ನಿರ್ಮಾಣವಾಗಬೇಕಾದ ಫ್ಲೈಓವರ್ ಉದ್ದವನ್ನು ಕಡಿತಗೊಳಿಸಿರುವುದು ಇದೀಗ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಬಹುನೀರಿಕ್ಷಿತ ಫ್ಲೈಒವರ್ ಯೋಜನೆ ಪ್ರಕಾರ ಗದಗ ರಸ್ತೆಯ ಎಲ್‌ಐಸಿ ಕಚೇರಿ ಮುಂಭಾಗದಿಂದ 150 ರ್ಯಾಂಪ್ ವಾಲ್ ನಂತರ ಫ್ಲೈಓರ್ ನಿರ್ಮಾಣವಾಗಬೇಕು. ಆದರೆ, ಇದೀಗ ಕಡೊತಗೊಳಿಸಿ ಚಿಟಗುಪ್ಪಿ ಪಾರ್ಕ್ ಮುಂಭಾಗದಿಂದ ಫ್ಲೈಓರ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಇದು ಕೊಪ್ಪೀಕರ್ ರಸ್ತೆಯ ಸಂಚಾರವನ್ನು ಫ್ಲೈಓವರ್ ಮೇಲೆ ಕಳುಹಿಸುವ ಬಗ್ಗೆ ಸಾಧಕ-ಬಾಧಕದ ಚರ್ಚೆ ನಡೆದಿದೆ ಅಂತಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.
ಇದೀಗ ಫ್ಲೈಓವರ್ ಕಡಿತ ಮಾಡುವ ಚಿಂತನೆ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ. ಚಿಟಗುಪ್ಪಿ ಪಾರ್ಕ್ ಮುಂಭಾಗದಿಂದ ಫ್ಲೈಓವರ್ ಮಾಡಿದರೆ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಫ್ಲೈಓವರ್ ನಿಷ್ಪ್ರಯೋಜಕವಾಗಲಿದೆ. ಇದರಿಂದ ಪಾಲಿಕೆ ಮುಂಭಾಗದಲ್ಲಿರುವ ಬಿಆರ್‌ಟಿಎಸ್ ಬಸ್ ನಿಲ್ದಾಣ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದು ವಾಸ್ತವ ಸಂಗತಿಯೋ ಹೌದೋ ಅಲ್ವೋ ಅನ್ನೋ ಅನುಮಾನ ಕೂಡ ವ್ಯಕ್ತವಾಗಿದೆ. ಈ ರಸ್ತೆಯಲ್ಲಿರುವ ಕೆಲವರ ಆಸ್ತಿ ಉಳಿಸುವ ಹುನ್ನಾರ ಅಂತಾ ಸಾರ್ವಜನಿಕರು ಆರೋಪಿಸ್ತಿದಾರೆ.
ಈ ಯೋಜನೆಯನ್ನು ಬಿಡ್ನಾಳವರೆಗೆ ವಿಸ್ತರಿಸಬೇಕು ಎನ್ನುತ್ತಿರುವಾಗ, ಇರುವ ಯೋಜನೆಯನ್ನು ಹದಗೆಡಿಸುವ ಹುನ್ನಾರ ನಡೆಸಿದ ಆರೋಪ ಕೇಳಿ ಬಂದಿದೆ. ಇನ್ನೂ ಯಾರದ್ದೋ ಹಿತಾಸಕ್ತಿ ಕಾಪಾಡುವ ಬದಲು ಸಾಮಾನ್ಯ ಜನರ ಹಾಗೂ ನಗರದ ಅಭಿವೃದ್ಧಿಯ ಚಿಂತನೆಯಿರಲಿ, ಫ್ಲೈಓವರ್ ಯೋಜನೆ ಮತ್ತೊಂದು ಬಿಆರ್‌ಟಿಎಸ್ ಆಗದಿರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.