ಹುಬ್ಬಳ್ಳಿ : ಕೋವಿಡ್-19ನಿಂದಾಗಿ ಇಡೀ ದೇಶವೇ ಮತ್ತೆ ಏಪ್ರಿಲ್ 30ರವರೆಗೆ ಲಾಕ್‌ಡೌನ್ ಆಗಲಿದೆ. ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಲ್ಲೇ ಇರಿ ಎಂದು ಎಷ್ಟೆಲ್ಲಾ ಜಾಗೃತಿ ಮೂಡಿಸುತ್ತಿದ್ದರೂ ಇದು ಹುಬ್ಬಳ್ಳಿ ಜನರ ಅರಿವಿಗೆ ಬರುತ್ತಿಲ್ಲ.
ಗುಂಪು ಸೇರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರತಿ ಸಾರಿ ಹೇಳಿದರೂ ಕೂಡ ಜನ ಮಾತ್ರ ಗುಂಪಿನಲ್ಲೇ ಗೋವಿಂದ ಎನ್ನುತ್ತಿದ್ದಾರೆ. ನಗರದ ಎಪಿಎಂಸಿಯಲ್ಲಿ ಕಿರಾಣಿ ಸಾಮಾಗ್ರಿ ಖರೀದಿಗೆ ಕೂಪನ್ ವ್ಯವಸ್ಥೆ ಕಲ್ಪಿಸಿದ್ದರೂ ಕೂಡಾ ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಯಾವುದಕ್ಕೂ ಬಗ್ಗದ ಸಾರ್ವಜನಿಕರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.