ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಕೋವಿಡ್ 19 ವೈರಸ್ನ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದಂತೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.
ಇಷ್ಟು ದಿನ ಲಾಕ್ ಡೌನ್ ಪಾಲಿಸಿ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ನಗರದ ಜನತೆ ಈಗ ಸ್ವಯಂ ಪ್ರೇರಣೆಯಿಂದ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಮನೆಯಿಂದ ಯಾರು ಹೊರ ಬರುತ್ತಿಲ್ಲ.
ಇದರಿಂದ ಕಿತ್ತೂರು ಚನ್ನಮ್ಮ ವೃತ್ತ, ಮರಾಠಾಗಲ್ಲಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಜನರ ಸುಳಿವೆ ಇಲ್ಲ. ಜನರು ಮನೆಯಿಂದ ಹೊರ ಬಾರದೆ ಕಟ್ಟು ನಿಟ್ಟಾಗಿ ಲಾಕ್ ಡೌನ್ ಪಾಲಿಸುತ್ತಿದ್ದಾರೆ.
ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಪಾಲಿಸುತ್ತಿರುವ ಹುಬ್ಬಳ್ಳಿ ಜನತೆ - Corona Effect Hubli
ಹುಬ್ಬಳ್ಳಿ ನಗರದ ಜನತೆ ಇದೀಗ ಕೊರೊನಾ ಭಯದಿಂದ ಸ್ವಯಂ ಪ್ರೇರಣೆಯಿಂದ ಲಾಕ್ ಡೌನ್ ಪಾಲಿಸುತ್ತಿದ್ದಾರೆ.