ಹುಬ್ಬಳ್ಳಿ: ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಆಸ್ತಿ ತೆರಿಗೆ ಹೆಚ್ಚಳ ಕುರಿತು ತಿಳುವಳಿಕೆ ಕಾರ್ಯಕ್ರಮಕ್ಕೆ ಪಾಲಿಕೆ ರೆವಿನ್ಯೂ ಆಫೀಸರ್ ಶಂಕರಾನಂದ ಬನಶಂಕರಿಗೆ ಆಮಂತ್ರಣ ನೀಡಲಾಗಿತ್ತು. ಆದರೆ ಅವರು ಸಭೆಗೆ ಆಗಮಿಸದೆ ಪಾಲಿಕೆಗೆ ಹೊಸದಾಗಿ ಬಂದಿರುವ ಸಹಾಯಕ ಆಯುಕ್ತ ಸಜ್ಜನ ಅವರನ್ನು ಕಳಿಸಿದ್ದರು. ಸಜ್ಜನ ಅವರು ಎರಡು ದಿನಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದು, ವರ್ತಕರು ಹಾಗೂ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡುವಷ್ಟು ಮಾಹಿತಿ ನನ್ನಲ್ಲಿಲ್ಲ ಎಂದರು.
ಈ ವೇಳೆ ವರ್ತಕರ ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಪಾಲಿಕೆ ಅಧಿಕಾರಿ ಬಿ.ಎಫ್.ಜಿದ್ದಿ ಉತ್ತರ ನೀಡಲು ಮುಂದಾದರು. ಪಾಲಿಕೆಯು ತೆರಿಗೆ ಹೆಚ್ಚಳ ಮಾಡಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೆ ಬೇಕಾಬಿಟ್ಟಿ ಏರಿಕೆ ಮಾಡುವುದು ಖಂಡನೀಯವಾಗಿದೆ ಎಂದು ವರ್ತಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.