ETV Bharat / state

ಹುಬ್ಬಳ್ಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಸಿಗಲಿಲ್ಲ ಕೋವಿಡ್​​ ಅಪಾಯ ಭತ್ಯೆ

ಹೋಟೆಲ್​​ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದವರಿಗೆ ಚಿಕಿತ್ಸೆ, ರೈಲುಗಳ ಮೂಲಕ ನಗರಕ್ಕೆ ಬರುತ್ತಿದ್ದ ಹಾಗೂ ಇಲ್ಲಿಂದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ, ಮೊಬೈಲ್ ಫೀವರ್ ಕ್ಲಿನಿಕ್ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸೇರಿದಂತೆ ಸುಮಾರು ಮೂರ್ನಾಲ್ಕು ತಿಂಗಳು ಅವಿರತ ಶ್ರಮ ವಹಿಸಿದ್ದಾರೆ..

Hubli
ಹುಬ್ಬಳ್ಳಿ
author img

By

Published : Jul 9, 2021, 10:31 AM IST

ಹುಬ್ಬಳ್ಳಿ : ಕೊರೊನಾ ಸೋಂಕಿನ ವಿರುದ್ಧ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗೆ ರಾಜ್ಯ ಸರ್ಕಾರ ಕೋವಿಡ್ ರಿಸ್ಕ್ ಭತ್ಯೆ ಘೋಷಣೆ ಮಾಡಿದೆ. ಆದರೆ, ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್​​ಗಳಿಗೆ ಯಾವುದೇ ರಿಸ್ಕ್ ಭತ್ಯೆ ನೀಡಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆಯಾ? ಎಂಬ ಪ್ರಶ್ನೆ ಕೊರೊನಾ ವಾರಿಯರ್ಸ್​ಗಳಲ್ಲಿ ಮೂಡಿದೆ.

ಕೊರೊನಾ ಮಹಾಮಾರಿಗೆ ವಿಶ್ವವೇ ತತ್ತರಿಸಿ ಹೋಗಿದೆ‌. ಇಂತಹ ಸಂದರ್ಭದಲ್ಲಿ ಯಾವುದೇ ಭಯ ಪಡದೆ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕಾರ್ಯವಾಗಿತ್ತು. ಸೋಂಕಿತರ ಆರೈಕೆ ಮಾಡಿ ಜೀವ ಉಳಿಸುವ ಕೆಲಸ ಮಾಡಿದ ವೈದ್ಯಕೀಯ ಸಿಬ್ಬಂದಿಗೆ ರಾಜ್ಯ ಸರ್ಕಾರ ರಿಸ್ಕ್ ಭತ್ಯೆ ಘೋಷಣೆ ಮಾಡಿ ಹಣ ಸಹ ಬಿಡುಗಡೆ ಮಾಡಿದೆ.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ್

ಇನ್ನೂ ಕೆಲವೆಡೆ ಈ ವಿಶೇಷ ಭತ್ಯೆಯನ್ನು ವೈದ್ಯಕೀಯ ಸಿಬ್ಬಂದಿ ಪಡೆದುಕೊಂಡಿದ್ದಾರೆ. ಆದರೆ, ಹು-ಧಾ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಂದ ಹಿಡಿದು ವೈದ್ಯಕೀಯ ಸಿಬ್ಬಂದಿಗೆ ನಯಾ ಪೈಸೆ ದೊರೆತಿಲ್ಲ. ಈ ವಿಚಾರವಾಗಿ ಮಹಾನಗರ ಪಾಲಿಕೆ ಕಮಿಷನರ್ ಸಹ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರಂತೆ.

ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಾಲಿಕೆ ಆಸ್ಪತ್ರೆಗಳ ವೈದ್ಯರ ಹಾಗೂ ಸಿಬ್ಬಂದಿಯ ಕಾರ್ಯ ಮರೆಯುವಂತಿಲ್ಲ. ಹೋಟೆಲ್​​ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದವರಿಗೆ ಚಿಕಿತ್ಸೆ, ರೈಲುಗಳ ಮೂಲಕ ನಗರಕ್ಕೆ ಬರುತ್ತಿದ್ದ ಹಾಗೂ ಇಲ್ಲಿಂದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ, ಮೊಬೈಲ್ ಫೀವರ್ ಕ್ಲಿನಿಕ್ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸೇರಿದಂತೆ ಸುಮಾರು ಮೂರ್ನಾಲ್ಕು ತಿಂಗಳು ಅವಿರತ ಶ್ರಮ ವಹಿಸಿದ್ದಾರೆ.

ಎರಡನೇ ಅಲೆ ಸಂದರ್ಭದಲ್ಲಿ ಹೋಮ್ ಐಸೊಲೇಷನ್​​ನಲ್ಲಿದ್ದವರಿಗೆ ಚಿಕಿತ್ಸೆ, ಇದರೊಂದಿಗೆ ನಾನ್ ಕೋವಿಡ್ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದಾರೆ‌. ಜತೆಗೆ ಕೋವಿಡ್ ಪರೀಕ್ಷೆ, ಕೋವಿಡ್ ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟೆಲ್ಲ ಸೇವೆ ಮಾಡಿದರೂ ಪಾಲಿಕೆ ವ್ಯಾಪ್ತಿಯ ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರ ಮರೆತಿದೆ ಎಂಬ ಆತಂಕದಲ್ಲಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕಾಲ ಕಳೆಯುತ್ತಿದ್ದಾರೆ‌‌.

ಕೊರೊನಾ ಸಮಯದಲ್ಲಿ ತಮ್ಮ ಕುಟುಂಬದ ಕಡೆ ಲಕ್ಷ್ಯ ವಹಿಸದೆ, ಜೀವದ ಹಂಗು ತೊರೆದು ನಿರಂತರವಾಗಿ ಹುಬ್ಬಳ್ಳಿ ಜನತೆಯ ಸೇವೆ ಸಲ್ಲಿಸುತ್ತಿರುವ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿನ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಆದಷ್ಟು ಬೇಗ ಸರ್ಕಾರ ರಿಸ್ಕ್ ಭತ್ಯೆ ನೀಡಲಿ ಎಂಬುವುದು ಎಲ್ಲರ ಆಗ್ರಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.