ETV Bharat / state

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ.. ಹಸೆಮಣೆ ಏರಬೇಕಿದ್ದವನ ಪ್ರಾಣ ತೆಗೆದ ಕೀಚಕರು - ಈಟಿವಿ ಭಾರತ​ ಕರ್ನಾಟಕ

ಹುಬ್ಬಳ್ಳಿಯಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹುಬ್ಬಳ್ಳಿಯ ಬಂಕಾಪುರ ಚೌಕ್​ದ ನಿವಾಸಿಯಾದ ನವೀನ್​ ಮೇಲೆ ಶನಿವಾರ ರಾತ್ರಿ ಮೂವರು ಪುಡಿ ರೌಡಿಗಳ ಗ್ಯಾಂಗ್‌ವೊಂದು ಮಾರಣಾಂತಿಕ ಹಲ್ಲೆ ಮಾಡಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೇ ನವೀನ್ ಮೃತಪಟ್ಟಿದ್ದಾರೆ.

Etv Bharathubli-murder-case-three-arrest
Etv Bharatಮದುವೆ ಮಾಡಿಕೊಂಡು ಸೆಟಲ್ ಆಗಬೇಕು ಎಂದವನ ಕಥೆ ಮುಗಿಸಿದ ಪುಡಿರೌಡಿಗಳು
author img

By

Published : Oct 17, 2022, 4:22 PM IST

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರದಿದೆ. ಹುಬ್ಬಳ್ಳಿಯ ಘಂಟಿಕೆರೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ನವೀನ್​ (27) ಕೊಲೆಗೀಡಾದ ಯುವಕ.

ಹುಬ್ಬಳ್ಳಿಯ ಬಂಕಾಪುರ ಚೌಕ್​ದ ನಿವಾಸಿಯಾದ ಈತ ಅಂದುಕೊಂಡಂತೆ ನಡೆದಿದ್ದರೇ ಹಸೆಮಣೆ ಏರಬೇಕಿತ್ತು. ಇತ್ತೀಚೆಗಷ್ಟೇ ಬದುಕಿಗೊಂದು ಉದ್ಯೋಗ ಅಂತಾ ಹುಡುಕಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಶನಿವಾರ ರಾತ್ರಿ ಮೂವರು ಪುಡಿ ರೌಡಿಗಳ ಗ್ಯಾಂಗ್‌ವೊಂದು ನವೀನ್​ ಮೇಲೆ ಅಟ್ಯಾಕ್ ಮಾಡಿದೆ. ತೆಲೆ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದೆ.‌ ತೀವ್ರವಾಗಿ ಗಾಯಗೊಂಡಿದ್ದ ನವೀನ್​ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾರೆ.

ಕೊಲೆಯ ಹಿಂದನ ಸತ್ಯ ನಿಗೂಢ : ಸಾವಿನ ಹಿಂದಿನ ಅಸಲಿ ಸತ್ಯ ಮಾತ್ರ ಇನ್ನೂ ಪೊಲೀಸರಿಗೆ ನಿಗೂಢವಾಗಿದೆ‌. ಶನಿವಾರ ಎಂದಿನಂತೆ ಘಂಟಿಕೇರಿಯ ಬಾರ್‌ವೊಂದರಲ್ಲಿ ಮದ್ಯ ಕುಡಿಯಲು ನವೀನ್​ ತೆರಳಿದ್ದರು. ಪ್ರತಿದಿನ ನವೀನ್​, ಮದ್ಯಪಾನ ಮಾಡಲು ಅದೇ ಬಾರ್‌ಗೆ ಬರೋದನ್ನು ಪುಡಿರೌಡಿಗಳು ಖಚಿತಪಡಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನವೀನ್​ ಕುಡಿದು ಇನ್ನೇನು ಬಾರ್‌ನಿಂದ ಮನೆ ಕಡೆಗೆ ಹೋಗಲು ಹೊರಬಂದಿದ್ದಾರಷ್ಟೇ.

ಮದುವೆ ಮಾಡಿಕೊಂಡು ಸೆಟಲ್ ಆಗಬೇಕು ಎಂದವನ ಕಥೆ ಮುಗಿಸಿದ ಪುಡಿರೌಡಿಗಳು

ಆಟೋದಲ್ಲಿ ಕಿಡ್ನ್ಯಾಪ್ ಸಂಚು ರೂಪಿಸಿ ಮೂವರು ರೌಡಿಗಳು ಬಂದಿದ್ದರು. ನವೀನ್​ ತಪ್ಪಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿದ್ದಾರೆ. ಓರ್ವ ರೌಡಿ ನವೀನ್​ ಮೇಲೆ ಹಿಂದಿನಿಂದ ಬಂದು ತಲೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ. ಹುಬ್ಬಳ್ಳಿಯ ಇಂದಿರಾನಗರದ ಶೇಖರ್, ಆನಂದ್ ಮತ್ತು ಅಭಿಶೇಕ್​ರನ್ನು ಬಂಧಿತರು. ಹಳೇ ವೈಷಮ್ಯ ಅಥವಾ ಯುವತಿ ವಿಚಾರ ಇರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ : ಬಂಗಾರಪೇಟೆಯಲ್ಲಿ ವೃದ್ಧೆಯ ಕೊಲೆ: ಚಿನ್ನಾಭರಣಕ್ಕಾಗಿ ಪಕ್ಕದ ಮನೆಯ ಸ್ನೇಹಿತೆಯಿಂದಲೇ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.