ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಸರಕು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಗರದ ಹಳೇ ಕೋರ್ಟ್ ವೃತ್ತದ ಬಳಿ ನಡೆದಿದೆ.
ಲಾರಿಯನ್ನು ಕೋರ್ಟ್ ವೃತ್ತದ ಬಳಿ ತಿರುಗಿಸುವಾಗ ಮಗುಚಿ ಬಿದ್ದಿದೆ. ಪಕ್ಕದಲ್ಲಿಯೇ ಇದ್ದ 20 ಅಡಿಯ ತಗ್ಗಿನಲ್ಲಿ ಲಾರಿ ಬಿದ್ದಿದೆ. ಪರಿಣಾಮ ಡಿಸೇಲ್ ಟ್ಯಾಂಕ್ ಒಡೆದು ಸಾಯಿಮಂದಿರದವರೆಗೂ ಡಿಸೇಲ್ ಹರಿದು ಹೋಗಿದೆ.
ಲಾರಿ ಪಲ್ಟಿಯಾದ ತಕ್ಷಣವೇ ಸ್ಥಳೀಯರು ಚಾಲಕನನ್ನು ಹೊರಗೆ ತೆಗೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಡಿಸೇಲ್ ಸೋರಿಕೆಯಿಂದ ಯಾವುದೇ ಅವಘಡ ಸಂಭವಿಸಬಾರದೆಂದು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾಗಿದೆ.