ಹುಬ್ಬಳ್ಳಿ: ಮನೆ ಬಿಟ್ಟು ಬಂದಿದ್ದ ಬಾಲಕನೋರ್ವನನ್ನು ಪಾಲಕರಿಗೆ ತಲುಪಿಸುವ ಮೂಲಕ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಹಾಗೂ ಹುಬ್ಬಳ್ಳಿ ಪತ್ರಕರ್ತರ ಸಂಘದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಬೆಳಗ್ಗೆ ಪ್ರೆಸ್ ಕ್ಲಬ್ಗೆ ಏಕಾಏಕಿ ಒಬ್ಬ ಪುಟ್ಟ ಬಾಲಕ ಪತ್ರಿಕೆ ಹಾಕುವ ಕೆಲಸ ಕೇಳಿಕೊಂಡು ಬಂದಿದ್ದಾನೆ. ಆಗ ಆತನ ಬಗ್ಗೆ ವಿಚಾರಿಸಿದಾಗ ಬಾಲಕ ಮನೆ ಬಿಟ್ಟು ಬಂದಿರುವ ಮಾಹಿತಿ ತಿಳಿದು ಬಂದಿದೆ. ನಂತರ ಪತ್ರಕರ್ತರು ಉಪಹಾರ ನೀಡಿ ಉಪಚರಿಸಿ ಬಾಲಕನನ್ನು ಪಾಲಕರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ಬಾಲಕನ ಪಾಲಕರು ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.