ಹುಬ್ಬಳ್ಳಿ : ಇಲ್ಲಿಯ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಡರಾತ್ರಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸುಪ್ರೀಂ ಮೆಟ್ಟಿಲು ಏರಿದೆ.
ಹೀಗಾಗಿ ಗಣೇಶ ಮಂಡಳಿ ತರಾತುರಿಯಲ್ಲಿ ಈದ್ಗಾ ಮೈದಾನದ ನಿಗದಿತ ಸ್ಥಳದಲ್ಲಿ ಚಿಕ್ಕ ಮೂರ್ತಿ ಹಾಗೂ ಉತ್ಸವ ಮೂರ್ತಿಯನ್ನು ಪ್ರತಿಪ್ಠಾಪನೆ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಮೂರುಸಾವಿರ ಮಠದಿಂದ ಮೂಲಕ ಗಣೇಶ ಮೂರ್ತಿ ತೆಗೆದುಕೊಂಡು ಬಂದು ಪ್ರತಿಷ್ಟಾಪಿಸುವ ಯೋಜನೆ ಇತ್ತು. ಆದರೆ ಅಂಜುಮನ್ ಸಂಸ್ಥೆ ಸುಪ್ರೀಂ ಮೊರೆ ಕಾರಣದಿಂದ ಸಮಯ ಬದಲಿಸಿ ಬೆಳಗ್ಗೆ 7:30ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ.
ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್ ನೇತೃತ್ವದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಂತ್ರಘೋಷಣೆ ಮುಖಾಂತರ ಪೂಜೆ ಆರಂಭಿಸಲಾಗಿದ್ದು. ಪಾಲಿಕೆ ಸದಸನ ಸಮಿತಿ ಅಧ್ಯಕ್ಷ ಸಂತೋಷ ಚೌಹ್ವಾಣ್ ಸೇರಿ ಹಲವಾರು ಹಿಂದೂ ಸಂಘಟನೆ ಮುಖಂಡರು ಭಾಗಿಯಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ