ETV Bharat / state

ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಹು-ಧಾ ಪೊಲೀಸ್ ಕಮೀಷನರೇಟ್ ಸಿದ್ಧ: ಲಾಬೂರಾಮ್​

ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿರುವ ಸೈಬರ್ ಕ್ರೈಂ ಪ್ರಕರಣಕ್ಕೆ ಕಡಿವಾಣ ಹಾಕಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಸಿದ್ಧತೆ ನಡೆಸಿದೆ. ಧಾರವಾಡ ಜಿಲ್ಲೆಯಲ್ಲಿ ಒಂದು ವಾರದಲ್ಲಿಯೇ ಎರಡು ಸೈಬರ್ ಕ್ರೈಂ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಸೈಬರ್ ವಂಚಕರ ಜಾಡನ್ನು ಭೇದಿಸಲು ಪೊಲೀಸ್​ ಇಲಾಖೆ ಮುಂದಾಗಿದೆ.

hubli-dharwad
ಹು-ಧಾ ಪೊಲೀಸ್ ಕಮೀಷನರೇಟ್
author img

By

Published : Mar 23, 2021, 2:18 PM IST

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯುವಕರನ್ನು ಕಂಗೆಡಿಸುತ್ತಿರುವ ಸೈಬರ್ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮೀಷನರೇಟ್ ಚಿಂತನೆ ನಡೆಸಿದೆ‌. ಯುವಕರ ವೀಕ್ನೆಸ್​ನ್ನು ಬಂಡವಾಳ ಮಾಡಿಕೊಂಡು ಹಣ ಪೀಕುವ ಗ್ಯಾಂಗ್ ಮಟ್ಟ ಹಾಕಲು ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಮುಂದಾಗಿದೆ.

ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಸಿದ್ಧತೆ

ಧಾರವಾಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿಯೇ ಎರಡು ಸೈಬರ್ ಕ್ರೈಂ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಸೈಬರ್ ವಂಚಕರ ಜಾಡನ್ನು ಭೇದಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಚಿಂತನೆ ನಡೆಸಿದೆ. ಯುವಕರಿಗೆ ವಾಟ್ಸ್​ಆ್ಯಪ್ ವಿಡಿಯೋ ಕಾಲಿಂಗ್ ಮಾಡಿ ನಗ್ನ ದೃಶ್ಯಗಳನ್ನು ತೋರಿಸಿ ವಿಡಿಯೋ ಮಾಡಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಆಯುಕ್ತ ಲಾಬುರಾಮ್ ನಿರ್ದೇಶನದಲ್ಲಿ ಪ್ರಯತ್ನ ನಡೆಯುತ್ತಿದೆ. ಯುವಕರು ಸಾಕಷ್ಟು ಸಮಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು, ಇದನ್ನು ಬಂಡವಾಳ ಮಾಡಿಕೊಂಡ ಬಹುತೇಕ ಖದೀಮರು ಇಂತಹ ಕಾರ್ಯಕ್ಕೆ ಮುಂದಾಗಿ ಹಣಕ್ಕೆ ಬೇಡಿಕೆ ಇಟ್ಟು ವಂಚನೆಗೆ ಮುಂದಾಗಿದ್ದಾರೆ.

ಇದನ್ನು ಓದಿ: ಸಿಡಿ ಗ್ಯಾಂಗ್​ ಶಂಕಿತರು ಭೋಪಾಲ್​ನಲ್ಲಿರುವ ಸುಳಿವು: ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಎಸ್​ಐಟಿ ತಂಡ

ಕಳೆದ ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿ ಯುವಕನಿಗೆ ಫೇಸ್‌ಬುಕ್‌ ಮೂಲಕ ರಿಕ್ವೆಸ್ಟ್ ಕಳಿಸಿ ನಂತರ ವಾಟ್ಸ್​ಆ್ಯಪ್ ಮೂಲಕ ವಿಡಿಯೋ ಕಾಲಿಂಗ್ ಮಾಡಿ ಯುವತಿಯೊಬ್ಬಳು ಬೆತ್ತಲಾಗುವ ದೃಶ್ಯವನ್ನು ಸೆರೆಹಿಡಿದು ಹಣಕ್ಕೆ ಬೇಡಿಕೆ ಇಟ್ಟು ಹಣ ನೀಡದೇ ಇದ್ದರೆ ವೈರಲ್ ಮಾಡುವುದಾಗಿ ಹೆದರಿಸಿದ ಪ್ರಕರಣವೊಂದು ಸೈಬರ್ ಠಾಣೆ ಮೆಟ್ಟಿಲು ಏರಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕರ ಪುತ್ರನಿಗೂ ಇದೇ ರೀತಿ ವಂಚನೆ ಮಾಡಿ 13,000 ರೂ. ಹಣವನ್ನು ಫೋನ್ ಫೇ ಮಾಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ ಮಹಾನಗರ ಪೊಲೀಸ್ ಆಯುಕ್ತರು ಸೈಬರ್ ಕ್ರೈಂಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಅಲ್ಲದೇ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದು, ಅಪರಿಚಿತ ವ್ಯಕ್ತಿಯ ನಂಬರ್​ನಿಂದ ಯಾವುದೇ ವಿಡಿಯೋ ಕಾಲ್ ಬಂದರೆ ರಿಸೀವ್ ಮಾಡದಂತೆ ಸಲಹೆ ನೀಡಿದ್ದಾರೆ. ಸಾರ್ವಜನಿಕರು ‌ಕೂಡ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಾರ್ವಜನಿಕರು ಜಾಗರೂಕತೆಯಿಂದ ಸಾಮಾಜಿಕ ಜಾಲತಾಣವನ್ನು ಬಳಸಬೇಕಿದೆ. ಹೆಚ್ಚು ಕಡಿಮೆ ಮಾಡಿದರೇ ಹಣದ ಜೊತೆಗೆ ಮಾನ ಮರ್ಯಾದೆ ಕೂಡ ಬೀದಿ ಪಾಲು ಆಗುವುದು ಖಚಿತ. ಅಪರಿಚಿತರ ಸೋಶಿಯಲ್ ಮೀಡಿಯಾ ಸ್ನೇಹದಿಂದ ಆದಷ್ಟು ದೂರ ಉಳಿಯುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.