ETV Bharat / state

ಹಳೆ ಯೋಜನೆ ಹಳ್ಳ ಹಿಡಿಸಿ ಹೊಸ ಯೋಜನೆಗೆ ಮುಂದಾದ ಪಾಲಿಕೆ: ಪಾಲಿಕೆ ನಿರ್ಧಾರಕ್ಕೆ ಸಾರ್ವಜನಿಕರ ಆಕ್ಷೇಪ - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿ ಧಾರವಾಡ ಸ್ವಚ್ಛ ಮಹಾನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ಬಕೆಟ್​​​ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದು, ಇದಕ್ಕೆ ಸಾರ್ವಜನಿಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

Kn_hbl
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
author img

By

Published : Nov 29, 2022, 6:45 PM IST

ಹುಬ್ಬಳ್ಳಿ: ಮನೆ ಮನೆಯಿಂದ ಕಸ ಸಂಗ್ರಹಣ ಕಾರ್ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಿ ಸಂಪೂರ್ಣವಾಗಿ ಈ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಆಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ​ ಮತ್ತೊಂದು ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದ್ದು, ಟ್ಯಾಗ್ ಆಧಾರಿತ ಬಕೆಟ್‌ಗಳನ್ನು ಹಂಚಿಕೆ ಮಾಡವ ಮೂಲಕ ಬಕೆಟ್ ಯೋಜನೆ ಜಾರಿಗೆ ತರಬೇಕು ಎನ್ನುವ ಚರ್ಚೆಗಳು ಪಾಲಿಕೆಯಲ್ಲಿ ಶುರುವಾಗಿದೆ. ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ.

ಹುಬ್ಬಳ್ಳಿ ಧಾರವಾಡವನ್ನು ಸ್ವಚ್ಛ ಮಹಾನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ 2.12 ಲಕ್ಷ ಮನೆಗಳಿಗೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್ (ಆರ್‌ಎಫ್‌ಐಡಿ) ಅಳವಡಿಸಲಾಗಿದೆ. ಇನ್ನೂ 30 ಸಾವಿರ ಮನೆಗಳಿಗೆ ಟ್ಯಾಗ್ ಅಳವಡಿಸುವುದು ಬಾಕಿಯಿದೆ.

ಕಸ ಸಂಗ್ರಹಿಸಲು ಆಗಮಿಸುವ ಪೌರ ಕಾರ್ಮಿಕರು, ಕಸ ತೆಗದುಕೊಂಡ ನಂತರ ಮನೆ ಮುಂಭಾಗದ ಟ್ಯಾಗ್ ರೀಡ್ ಮಾಡುವುದು ನಿಯಮ. ಆದರೆ ಕೆಲವಡೆ ಪೌರ ಕಾರ್ಮಿಕರು ಟ್ಯಾಗ್ ರೀಡ್ ಮಾಡುತ್ತಿದ್ದಾರೆ ಹೊರತು ಕಸ ಸಂಗ್ರಹಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಹಾಗಾಗಿ ಆರ್‌ಎಫ್‌ಐಡಿ ಟ್ಯಾಗ್ ಇರುವ ಬಕೆಟ್‌ಗಳನ್ನು ನೀಡಿದರೆ ಇದನ್ನು ತಪ್ಪಿಸಬಹುದು ಎನ್ನುವುದು ಪಾಲಿಕೆ ಚಿಂತನೆಯಾಗಿದೆ.

ಎಕ್ಸ್‌ಪೋವೊಂದರಲ್ಲಿ ಆರ್‌ಎಫ್‌ಐಡಿ ಟ್ಯಾಗ್ ಬಕೆಟ್‌ವೊಂದಕ್ಕೆ 200 ರೂ. ದರ ನೀಡಿ ಪ್ರತಿ ಮನೆಗೆ ಒಣ ಹಾಗೂ ಹಸಿ ಕಸಕ್ಕಾಗಿ ಎರಡು ಬಕೆಟ್‌ಗಳನ್ನು 2.12 ಲಕ್ಷ ಮನೆಗಳಿಗೆ ನೀಡಿದರೆ ಸರಿ ಸುಮಾರು 40 ಕೋಟಿ ರೂ. ಗೂ ಹೆಚ್ಚಿನ ಹಣ ಬೇಕಾಗುತ್ತದೆ. ದೊಡ್ಡ ಮೊತ್ತದ ಯೋಜನೆಗೆ ಪಾಲಿಕೆ ಆರ್ಥಿಕವಾಗಿ ಸದೃಢವಾಗಿದೆಯಾ ಎಂಬುವುದನ್ನು ಕೂಡ ಯೋಚಿಸಬೇಕಾಗಿದೆ.

ದೇಶದ ಮೊದಲ ಸ್ವಚ್ಛ ನಗರ ಎನಿಸಿಕೊಂಡಿರುವ ಇಂದೋರ್‌ನಲ್ಲಿ ಕೂಡ ಈ ಬಕೆಟ್ ಯೋಜನೆಯಿಲ್ಲ. 2.12 ಲಕ್ಷ ಮನೆಗಳಿಗೆ ಟ್ಯಾಗ್ ಕೂಡಿಸಿದರೂ ಇಲ್ಲಿಯವರೆಗೆ 1 ಲಕ್ಷ ಮನೆಗಳಿಗೆ ಸರಿಯಾಗಿ ರೀಡ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಮತ್ತೊಂದು ಹೊಸ ಯೋಜನೆಗೆ ಚಿಂತನೆ ನಡೆಸಿರುವ ಪಾಲಿಕೆಗೆ ಸಾರ್ವಜನಿಕರ ತೆರಿಗೆ ಹಣದ ಬಗ್ಗೆ ಕಾಳಜಿಯಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ರೀಡ್ ಬಗೆಗಿನ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸಣ್ಣ ಪುಟ್ಟ ಕ್ರಮಗಳಿಗೆ ನೂರಾರು ಕೋಟಿ ರೂಪಾಯಿ ಸುರಿಯುವ ಅಗತ್ಯವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ವಿನಃ ಹೊಸ ವ್ಯವಸ್ಥೆ ಚಿಂತನೆ ಅವೈಜ್ಞಾನಿಕ ಹಾಗೂ ತರಾತುರಿ ನಿರ್ಧಾರ ಸರಿಯಲ್ಲ.

ಸಾರ್ವಜನಿಕರ ತೆರಿಗೆ ಹಣ ಬಳಕೆ ಮಾಡುವಾಗ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇರಬೇಕು. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನ ತಂದರೆ ಈ ಸಮಸ್ಯೆಗಳು ಇರುವುದಿಲ್ಲ. ಕೋಟಿ ಕೋಟಿ ಹಣ ಸುರಿದು ಹೊಸ ಯೋಜನೆ ಜಾರಿಗೆ ತರುವ ಬದಲು ಹಳೆಯದನ್ನೇ ಸರಿಯಾಗಿ ನಿರ್ವಹಣೆ ಮಾಡಿ ಜನರ ತೆರಿಗೆ ಹಣ ಉಳಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ವಿವಾದ ಸೃಷ್ಟಿಸುತ್ತಾರೆ: ಜಗದೀಶ್​ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.