ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೊರೊನಾ ಎಲ್ಲಾ ಕ್ಷೇತ್ರಗಳ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದ್ರೆ ಲಾಕ್ಡೌನ್ ಸಂದರ್ಭದಲ್ಲೂ ಈ ಪಾಲಿಕೆ ಉತ್ತಮ ರೀತಿಯಲ್ಲಿ ಆದಾಯ ಸಂಗ್ರಹಿಸಿದೆ.
ಕೊರೊನಾ ಅಟ್ಟಹಾಸದಿಂದ ಎಲ್ಲೆಡೆಯಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎದೆಷ್ಟೋ ವಾಣಿಜ್ಯ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಆನ್ಲೈನ್ನಲ್ಲಿ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸೋಕೆ ಹು-ಧಾ ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿತ್ತು. ಇದರಿಂದಾಗಿ ಬಹಳಷ್ಟು ಆದಾಯ ಕೂಡಾ ಹರಿದುಬಂತು.
ಕೊರೊನಾ ವೇಳೆಯಲ್ಲೂ ಕಚೇರಿಗಳಿಗೆ ತೆರಳಲು ಜನ ಭಯ ಪಡುತ್ತಿದ್ದರು. ಈ ವೇಳೆ ತೆರಿಗೆ ಸಂಗ್ರಹ ಕೂಡಾ ಕಷ್ಟದ ವಿಚಾರವಾಗಿತ್ತು. ಆನ್ಲೈನ್ನಲ್ಲಿ ತೆರಿಗೆ ಪಾವತಿಸಲು ಅನುಮತಿ ನೀಡಿದ ಪರಿಣಾಮ ಏಪ್ರಿಲ್ನಿಂದ ಜುಲೈ ಅಂತ್ಯದವರೆಗೆ ₹32 ಕೋಟಿ ಸಂಗ್ರವಾಗಿದೆ. ಆಸ್ತಿ ತೆರಿಗೆ ಶೇ.5ರಷ್ಟು ರಿಯಾಯಿತಿ ನೀಡಿದರೂ ಹೆಚ್ಚು ತೆರಿಗೆ ಸಂಗ್ರಹವಾಗುವ ಮೂಲಕ ಅಚ್ಚರಿ ಮೂಡಿಸಿದೆ.
ಸಾರ್ವಜನಿಕರು ತೆರಿಗೆ ಪಾವತಿಸಿರುವ ಕಾರಣದಿಂದಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಹುಬ್ಬಳ್ಳಿ ಧಾರವಾಡದಲ್ಲಿ ಆಗಲಿವೆ ಅಂತ ಅಲ್ಲಿನ ಆಯುಕ್ತರು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆನ್ಲೈನ್ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸವನ್ನು ಪಾಲಿಕೆ ಮಾಡಲಿದ್ದು, ಜನರ ಸಹಕಾರ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.