ಹುಬ್ಬಳ್ಳಿ: ಸಿಮ್ ಬ್ಲಾಕ್ ಓಪನ್ ಮಾಡಲು ಮೊಬೈಲ್‌ಗೆ ಟೀಮ್ ವೀವರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ ವಂಚಕ, ನಗರದ ಯಲ್ಲಾಪುರ ಓಣಿಯ ವಿಜಯಲಕ್ಷ್ಮಿ ಗಂಗಣ್ಣವರ ಎಂಬುವರ ಎಸ್‌ಬಿಐ ಖಾತೆಯಿಂದ ₹1.51 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.
ವಿಜಯಲಕ್ಷ್ಮಿ ಅವರ ಮೊಬೈಲ್‌ಗೆ ಸಿಮ್ ಬ್ಲಾಕ್ ಆಗಿರುವ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಲು ಅದರಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಟೀಮ್ ವೀವರ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ವಂಚಕ ತಿಳಿಸಿದ್ದ. ಅದರಂತೆ ವಿಜಯಲಕ್ಷ್ಮಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆಗ ಆ ಆ್ಯಪ್‌ಗೆ ಅಕ್ಸೆಸ್ ನೀಡಿ, ಹಣ ವರ್ಗಾಯಿಸಿಕೊಂಡಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.