ETV Bharat / state

ನಾಳಿನ ಹುಬ್ಬಳ್ಳಿ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ಸಚಿವ ಸಂಪುಟದ ವಿಸ್ತರಣೆ ಚರ್ಚೆ!? - ಸಮಾವೇಶಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮನ

ಸಮಾವೇಶಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿರುವುದು ಬಹುತೇಕ ಖಚಿತ ಎಂದು‌ ಹೇಳಲಾಗುತ್ತಿದೆ. ವಿಶೇಷ ಅಂದ್ರೆ ನಾಳಿನ ಸಮಾವೇಶಕ್ಕೆ ಶಾಸಕ ಬಿ ಸಿ ಪಾಟೀಲ್​ ಆಗಮಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

Hubli Citizenship awareness Conference: Possibilities of Cabinet Expansion discussion
ಹುಬ್ಬಳ್ಳಿ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ಸಚಿವ ಸಂಪುಟದ ವಿಸ್ತರಣೆ ಚರ್ಚೆ ಸಾಧ್ಯತೆ
author img

By

Published : Jan 17, 2020, 7:32 PM IST

ಹುಬ್ಬಳ್ಳಿ: ನಾಳೆ ನಡೆಯಲಿರುವ ಪೌರತ್ವ ಜನಜಾಗೃತಿ ಸಮಾವೇಶದಲ್ಲಿ ರಾಜ್ಯದ ರಾಜಕೀಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ನಾಳೆ ವಾಣಿಜ್ಯನಗರಿಯಲ್ಲೇ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಸಮಾವೇಶಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿರುವುದು ಬಹುತೇಕ ಖಚಿತ ಎಂದು‌ ಹೇಳಲಾಗುತ್ತಿದೆ. ವಿಶೇಷ ಅಂದ್ರೆ ನಾಳಿನ ಸಮಾವೇಶಕ್ಕೆ ಶಾಸಕ ಬಿ ಸಿ ಪಾಟೀಲ್​ ಆಗಮಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇದೆಲ್ಲಾ ಒಂದೆಡೆಯಾದರೆ, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ರಮೇಶ ಜಾರಕಿಹೊಳಿ, ಮಹೇಶ ಕಮಟಳ್ಳಿ, ಶ್ರೀಮಂತಗೌಡ ಪಾಟೀಲ ಸೇರಿ ಮುಂತಾದವರು ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಮಿತ್ ಶಾ ಭೇಟಿ ರಾಜ್ಯ ರಾಜಕರಣದಲ್ಲಿ ಒಂದಿಷ್ಟು ಬದಲಾವಣೆ ತರುವ ಸಾಧ್ಯತೆಯಿದೆ. ಸಂಪುಟ ವಿಸ್ತರಣೆಗೂ ಮೊದಲೇ ಯಾರಿಗೆ ಯಾವ ಖಾತೆ ಸಿಗುತ್ತೋ ಎಂಬುದರ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಿದೆ‌.

Intro:HubliBody:ಸ್ಲಗ್:- ಸಿಎಎ ಸಭೆ ಸಿದ್ದತೆ! ಚೋಟಾ ಮುಂಬೈನಲ್ಲಿ ಪೊಲೀಸ್ ಬಿಗು ಬಂದೋಬಸ್ತ್.

ಹುಬ್ಬಳ್ಳಿ:-ಪೌರತ್ವ ತಿದ್ದುಪಡಿ ಕಾಯ್ದೆ ದೇಶದೆಲ್ಲೆಡೆ ಭುಗಿಲೆದ್ದಿದ್ರೆ, ಮತ್ತೊಂದೆಡೆ ಜನಜಾಗೃತಿಗಾಗಿ ಬಿಜೆಪಿ ಮುಖಂಡರು ಮನೆ ಮನೆಗೆ ತೆರಳುತ್ತಿದ್ದಾರೆ. ಇದರ ಅಂಗವಾಗಿ ನಾಳೆ ಚೋಟಾ ಮುಂಬೈನಲ್ಲಿ ನಡೆಯುತ್ತಿರುವ ಬೃಹತ್ ಜನಜಾಗೃತಿ ಸಭೆಗೆ ಸಕಲ ಸಿದ್ದತೆಗಳು ನಡೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.ಅದಕ್ಕೇ ಕಾಂಗ್ರೆಸ್ ವಿರೋಧಿಸಿ ಅಮಿತ್ ಶಾ ಗೋ ಬ್ಯಾಕ್ ಎಂಬ ಸ್ಲೋಗನ್ ಇಟ್ಟಕೊಂಡು ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ...

ಹೌದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋದಿಸಿ ಜನರು ಬೀದಿಗಿಳಿದಿದ್ರೆ, ಮತ್ತೊಂದೆಡೆ ಬಿಜೆಪಿ ಮುಖಂಡರು ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ನಾಳೆ ವಾಣಿಜ್ಯನಗರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಗಮಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಇನ್ನು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಹತ್ ಸಭೆ ನಡೆಯುತ್ತಿದ್ದು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಮಾಡಲಾಗಿದೆ. ಸಂಜೆ ನಾಲ್ಕು ಗಂಟೆಗೆ ಸಭೆ ನಡೆಯಲಿದ್ದು, 400 ಚದರ ಅಡಿ ವಿಸ್ತಿರ್ಣದ ಬೃಹತ್ ವೇದಿಕೆ ನಿರ್ಮಾಣವಾಗಿದೆ. ದೊಡ್ಡ ವೇದಿಕೆ ಪಕ್ಕದಲ್ಲಿ ಸ್ಥಳಿಯ ಹಾಗೂ ರಾಜ್ಯ ಬಿಜೆಪಿ ಮುಖಂಡರಿಗೆ ಮತ್ತೊಂದು ವೇದಿಕೆ ನಿರ್ಮಿಸಲಾಗಿದೆ. ಮೈದಾನದಲ್ಲಿ 30ಸಾವಿರಕ್ಕು ಹೆಚ್ಚು ಖರ್ಚಿಗಳನ್ನ ಹಾಕಲಾಗಿದ್ದು ಇನ್ನೂ ನಾಳೆ ಅಮಿತ್ ಗೊ ಬ್ಯಾಕ್ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಲು ತಯಾರಿ ನಡೆಸಿದ್ದಾರೆ. ಆದ್ರೇ ಪೋಲಿಸ್ ಆಯುಕ್ತರು ಪ್ರತಿಭಟನೆಗೆ ಇದಕ್ಕೇ ಅನುಮತಿ ನೀಡಿಲ್ಲ ಆದ್ರೂ ನಾವೂ ಹೋರಾಟ ಮಾಡೇ ಮಾಡುತ್ತೆವೆ ಅನ್ನೊದು ಕಾಂಗ್ರೆಸ್ ಮುಖಂಡರ ಮಾತು.

ಬೈಟ್:-ರಜತ್ ಉಳ್ಳಾಗಡ್ಡಿ ( ಕಾಂಗ್ರೆಸ್ ಮುಖಂಡ)

ಜನಜಾಗೃತಿ ಕಾರ್ಯಕ್ರಮ ವಿರೋಧಿಸಿ ಕಾಂಗ್ರೇಸ್ ಈಗಾಗಲೇ ಅಮಿತ್ ಶಾ ಗೋ ಬ್ಯಾಕ್ ಪ್ರತಿಭಟನೆ ಆರಂಭಿಸಿದ್ದು, ನಾಳೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವು ಮೂಲಕ ಪ್ರತಿಭಟನೆಗೆ ಸಜ್ಜಾಗಿದೆ. ಮತ್ತೊಂದೆಡೆ ನಗರದೆಲ್ಲೆಡೆ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 6 ಡಿಸಿಪಿ, 20 ಎಸಿಪಿ ಹಾಗೂ 3500ಕ್ಕು ಹೆಚ್ಚೂ ಪೋಲಿಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನೆಹರೂ ಮೈದಾನದ ಸುತ್ತಲು ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಎಸ್ ಪಿಜಿ ತಂಡ ಕೂಡ ಈಗಾಗಲೇ ಭದ್ರತೆಯನ್ನ ಪರಿಶೀಲನೆ ಮಾಡುತ್ತಿದ್ದು, ಸುಗಮ ಸಂಚಾರಕ್ಕಾಗಿ ಬೇರೆ ಬೆರೆ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಜನರ ವಾಹನಗಳ ನಿಲ್ದಾಣಕ್ಕಾಗಿ ನಾಲ್ಕು ದಿಕ್ಕುಗಳಲ್ಲಿಯು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ...

ಬೈಟ್:- ಆರ್.ದೀಲಿಪ್ ಪೋಲಿಸ್ ಆಯುಕ್ತ

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮತ್ತೊಂದೆಡೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಚಿವ ಅಮಿತ್ ಶಾಗೆ ಪ್ರತಿಭಟನೆಯ ಬಿಸಿಯಾವ ರೀತಿ ತಟ್ಟುತ್ತದೆ ಎಂದು'ಕಾಯ್ದುನೋಡಬೇಕಿದೆ!

_________________________________

Yallappa kundagol

HUBLIConclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.