ETV Bharat / state

ಸೋರುತಿಹುದು ಹುಬ್ಬಳ್ಳಿ ಕೇಂದ್ರಿಯ ಬಸ್ ನಿಲ್ದಾಣ.. ಪರದಾಡಿದ ಪ್ರಯಾಣಿಕರು

author img

By

Published : Jul 27, 2023, 4:07 PM IST

Updated : Jul 27, 2023, 5:35 PM IST

ವಾಯವ್ಯ ಸಾರಿಗೆ ಸಂಸ್ಥೆಗೆ ಸೇರಿದ ಹುಬ್ಬಳ್ಳಿ ಕೇಂದ್ರೀಯ ಬಸ್‌ ನಿಲ್ದಾಣದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿವೆ. ಚಾವಣಿಯಿಂದ ನೀರು ಸೋರಿಕೆಯಿಂದ ಪ್ರಯಾಣಿಕರು ಕೊಡೆ ಹಿಡಿದು ಆಸನದಲ್ಲಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.

Hubli New Bus Stand
ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ಸೋರುತಿರುವುದು
ಸೋರುತಿಹುದು ಹುಬ್ಬಳ್ಳಿ ಕೇಂದ್ರಿಯ ಬಸ್ ನಿಲ್ದಾಣ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ನಗರದ ಬಹುತೇಕ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಸೋರುತ್ತಿವೆ. ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣ ಕೂಡ ಇದರಿಂದ ಹೊರತಾಗಿಲ್ಲ.

ಹುಬ್ಬಳ್ಳಿಯಿಂದ ಬೆಂಗಳೂರು, ವಿಜಯಪುರ,ಬಳ್ಳಾರಿ, ಚೆನೈ, ಹೈದರಬಾದ್‌,ಮುಂಬೈ, ಪುಣೆ, ಶಿರಡಿ ಸಾಂಗಲಿ ಮೀರಜ್ ಸೇರಿ ಹಲವಾರು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್‌ ನಿಲ್ದಾಣದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು, ನೆಮ್ಮದಿಯ ನಿದ್ದೆಗೂ ಪ್ರಯಾಣಿಕರು ಪರದಾಡುವಂತಾಗಿದೆ.

ಶಿಥಿಲಗೊಂಡ ಚಾವಣಿಯಿಂದ ಮಳೆ ನೀರು ಸೋರುತ್ತಿದ್ದು, ಕೆಲ ಪ್ರಯಾಣಿಕರು ಕೊಡೆಗಳನ್ನು ಹಿಡಿದು ಆಸನದಲ್ಲಿ ಕೂರುವ ಸ್ಥಿತಿ ಇದೆ. ಚಾವಣಿ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿ ನಿರಂತರ ಹನಿ ಹನಿ ತೊಟ್ಟಿಕ್ಕುತ್ತಿದೆ. ನಿಲ್ದಾಣದಲ್ಲಿನ 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿವೆ. 12ನೇ ಪ್ಲಾಟ್‌ಫಾರ್ಮ್‌ ಸಂಪೂರ್ಣ ಜಲಾವೃತವಾಗಿದೆ.

bus stand is leaking rain water
bus stand is leaking rain water

ಕೇಂದ್ರೀಯ ಹೊಸ ಬಸ್‌ನಿಲ್ದಾಣದ ಚಾವಣಿ ಸೋರುತ್ತಿರುವದರಿಂದ ಪ್ರಯಾಣಿಕರು ಧರಿಸಿರುವ ಡ್ರೆಸ್​ಗಳು ಒದ್ದೆಗೊಂಡು ತಂಪಾದ ಗಾಳಿಗೆ ನಡುಗವಂತಾಗಿದೆ. ವಯಸ್ಸಾದವರಂತೂ ಬಸ್ ನಿಲ್ದಾಣ ಚಾವಣಿ ಸೋರುತ್ತಿರುವ ನೀರಿನ ಹನಿ, ಬೀಸುತ್ತಿರುವ ಗಾಳಿಗೆ ಒಂದೇ ಕಡೆ ಕೂರಲು ಆಗದೇ ಅತ್ತೊಮ್ಮೆ- ಇತ್ತೊಮ್ಮೆ ತಿರುಗಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ.

ಅಂಗಡಿ ಮಳಿಗೆ, ಹೊಟೇಲ್​ನಲ್ಲೂ ಪಜೀತಿ ​: ಪ್ರವೇಶ ದ್ವಾರದ ಬಲಭಾಗದಲ್ಲಿ ಟೆಂಡರ್‌ ಪಡೆದಿರುವ ಎರಡು ಅಂಗಡಿಗಳಿದ್ದು, ಸೋರುವ ಮಳೆನೀರಿನಿಂದ ರಕ್ಷಿಸಿಕೊಳ್ಳಲು, ಮುಂಭಾಗಕ್ಕೆ ಚಾವಣಿ ಹಾಕಿಕೊಂಡಿದ್ದಾರೆ. ಪ್ರಯಾಣಿಕರು ಅಂಗಡಿ ,ಹೊಟೇಲ್​ಗೆ ಹೋಗಿ ಸ್ವಲ್ಪ ಹೊತ್ತಾದರೂ ಕುಳಿತು ಏನಾದರೂ ತಿನ್ನಬೇಕು ಎಂದರೂ, ಅಲ್ಲಿಯೂ ಕಟ್ಟಡ ತೇವಾಂಶಗೊಂಡು ಸೋರುತ್ತಿವೆ. ಬಸ್ ನಿಲ್ದಾಣ ಚಾವಣಿ ಸೋರಿಕೆಯಿಂದ ಪ್ರಯಾಣಿಕರು ಪಜೀತಿಗೆ ಒಳಗಾಗಿ, ಸರ್ಕಾರದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರು.

ಪ್ರಯಾಣಿಕರು ಸೂಟ್‌ಕೇಸ್, ಬ್ಯಾಗ್​ಗಳನ್ನು ಹೊತ್ತುಕೊಂಡು ಆಯಾ ಪ್ಲಾಟ್‌ಫಾರ್ಮ್‌ಗಳಿಗೆ ನೀರಿನಲ್ಲೇ ದಾಟಿಕೊಂಡು ಹೋಗಬೇಕಾಗಿದೆ. ಮಳೆ ನೀರು ಸೋರದಂತೆ ನಿಯಂತ್ರಿಸಲು, ಕಟ್ಟಡದ ಕೆಲ ಕಡೆ ಬೀಮ್‌ಗಳಿಗೆ ತಗಡು ಹಾಕಲಾಗಿದೆ. ಸಿಬ್ಬಂದಿ ವಿಶ್ರಾಂತಿಗೃಹದ ಗೋಡೆಗಳು ತೇವಗೊಂಡಿದ್ದು, ಒಂದು ಭಾಗವನ್ನು ಈಚೆಗಷ್ಟೇ ಸರಿಪಡಿಸಿ ಪ್ಲಾಸ್ಟರ್‌ ಮಾಡಲಾಗಿದೆ. ಆದರೆ, ಪೂರ್ಣಪ್ರಮಾಣದಲ್ಲಿ ಸುವ್ಯವಸ್ಥಿತವಾಗಿ ಮಾಡಲಾಗಿಲ್ಲ.

ವಾಯವ್ಯ ಸಾರಿಗೆ ಸಂಸ್ಥೆಯ ಎಂಜಿನಿಯರ್ ಹೇಳುವದೇನು ? ಸರ್ಕಾರದ ಕಟ್ಟಡದ ಬಾಳಿಕೆ ಅವಧಿ ಕನಿಷ್ಠ 60 ವರ್ಷ. 2000ನೇ ಇಸವಿಯಲ್ಲಿ ಬಸ್‌ ನಿಲ್ದಾಣ ಉದ್ಘಾಟನೆಯಾಗಿದೆ. ಅನುದಾನ ಕೊರತೆಯಿಂದ ಬಸ್‌ ನಿಲ್ದಾಣ ಸುಸಜ್ಜಿತವಾಗಿ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಪೈಪ್‌ಗಳಲ್ಲಿ ಕಸ ತುಂಬಿದ್ದು, ಮಳೆ ನೀರು ಹರಿಯುವುದಿಲ್ಲ. ಅದಕ್ಕೆ ಚಾವಣಿ ಮೇಲೆ ನೀರು ಹರಿಯದೇ ಸೋರುತ್ತಿದೆ. ವಾಯವ್ಯ ಸಾರಿಗೆ ಮೇಲಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರ ಯರಗುಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ: Karnataka Rains: ರಾಜ್ಯಾದ್ಯಂತ ಮುಂಗಾರು ಮಳೆ ಹನಿಗಳ ಲೀಲೆ! PHOTOಗಳಲ್ಲಿ ನೋಡಿ..

Last Updated : Jul 27, 2023, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.