ETV Bharat / state

ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿ ಉದ್ಯಮಿ ಗಡಿಪಾರು - ಸರ್ಕಾರಿ ಯೋಜನೆಗೆ ಮೋಸ

ತನ್ನ ವಿರುದ್ಧ ಧ್ವನಿ ಎತ್ತಿದ್ದ ಸಾಕ್ಷಿಗಳನ್ನು ಕೂಡ ನಾಶ ಮಾಡಿದ್ದ ಗಂಭೀರ ಪ್ರಕರಣ ಇದಾಗಿದ್ದು ಆರೋಪಿ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ ಗಡಿಪಾರಾಗಿದ್ದಾರೆ.

Businessman Manjunath Virupakshappa Harlapura
ಉದ್ಯಮಿ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ
author img

By

Published : Mar 28, 2023, 2:17 PM IST

ಹುಬ್ಬಳ್ಳಿ: ನಗರದ ಖ್ಯಾತ ಉದ್ಯಮಿಯೊಬ್ಬರನ್ನು ಆರು ತಿಂಗಳ ಕಾಲ ಗಡಿಪಾರು ಮಾಡಿ ಧಾರವಾಡ ಕಂದಾಯ ಇಲಾಖೆ ಎಸಿ ಅಶೋಕ್ ತೆಲಿ ಆದೇಶ ಹೊರಡಿಸಿದ್ದಾರೆ. ಉದ್ಯಮಿ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ ಎಂಬುವವರೇ ಧಾರವಾಡದಿಂದ ಬೀದರ್​ಗೆ ಆರು ತಿಂಗಳ ಕಾಲ ಗಡಿಪಾರಾದವರು. ಇವರು ವಿರುದ್ಧ ಪಡಿತರ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಮತ್ತು ಕಂದಾಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.

ಹುಬ್ಬಳ್ಳಿ ತಾಲ್ಲೂಕಿನ ಬಿಡನಾಳ ಗ್ರಾಮದ ನಿವಾಸಿಯಾಗಿರುವ ಮಂಜುನಾಥ ಹರ್ಲಾಪುರ ಅವರು ಹಲವಾರು ವರ್ಷಗಳಿಂದ ಬಾಲಾಜಿ ಟ್ರೇಡಿಂಗ್​ನಲ್ಲಿ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದರು. ಅಲ್ಲದೇ ಇದರ ವಿರುದ್ಧ ಧ್ವನಿ ಎತ್ತುವ ಸಾಕ್ಷಿಗಳನ್ನು ನಾಶ ಮಾಡುತ್ತಿದ್ದರು. ಸರ್ಕಾರಿ ಯೋಜನೆಗೆ ಮೋಸ ಮತ್ತು ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಧಾರವಾಡ ಎಸ್ಪಿ ಆರೋಪಿಸಿ ಮಂಜುನಾಥ ಗಡಿಪಾರಿಗೆ ಎಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಎಸಿ ಅಶೋಕ್ ತೆಲಿ ಅವರು ಆರು ತಿಂಗಳು ಕಾಲ ಮಂಜುನಾಥ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: 700 ಪಂಜಾಬಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದ ಕೆನಡಾ: ಟ್ರಾವೆಲ್​ ಏಜೆಂಟ್​​​ರಿಂದ​ ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.