ಹುಬ್ಬಳ್ಳಿ : ಉಪಚುನಾವಣೆ ಸಂಬಂಧ ನಮ್ಮನ್ನ ಸಭೆಗೆ ಕರೆಯಲಾಗಿತ್ತು. ನಾವು ನಮ್ಮ ಅಭಿಪ್ರಾಯವನ್ನ ತಿಳಿಸಿದ್ದು, ಪಕ್ಷದ ವರಿಷ್ಠರ ಮಾತಿಗೆ ನಾವು ಬದ್ದರಾಗಿದ್ದೇವೆ ಎಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಡಾ. ಬಸವರಾಜ್ ಕೇಲಗಾರ್ ಮತ್ತು ಯು ಬಿ ಬಣಕಾರ್ ಹೇಳಿದರು.
ಪಕ್ಷದ ವರಿಷ್ಠರು ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ದರಾಗಿದ್ದೇವೆ. ಆದರೆ, ಅನರ್ಹ ಶಾಸಕರ ವಿಚಾರ ಇನ್ನೂ ಕೋಟ್೯ನಲ್ಲಿದೆ. ಅವರು ಇನ್ನೂ ನಮ್ಮ ಪಕ್ಷ ಸೇರಿಲ್ಲ. ಹೀಗಾಗಿ ಈಗಲೇ ಅವರಿಗೆ ಟಿಕೆಟ್ ನೀಡಿದರೆ ಹೇಗೆ ಎನ್ನುವ ಪ್ರಶ್ನೆಗಳಿಗೆ ನಾವು ಉತ್ತರಿಸಲ್ಲ. ಅವರು ನಮ್ಮ ಪಕ್ಷ ಸೇರಿ ಟಿಕೆಟ್ ಪಡೆದರೆ ಆವಾಗ ನಮ್ಮ ನಿರ್ಣಯ ತಿಳಿಸುತ್ತೇವೆ. ಈಗಲೇ ಊಹಾಪೋಹಗಳಿಗೆ ಉತ್ತರ ನೀಡಲ್ಲ.
ಪಕ್ಷದ ಕಷ್ಟಕಾಲದಲ್ಲಿ ಅನರ್ಹರ ಸಹಾಯ ಮಾಡಿದ್ದಾರೆ ಅಂತಾ ವರಿಷ್ಠರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ಏನು ಹೇಳುತ್ತೋ ಅದಕ್ಕೆ ನಾವು ಬದ್ದ. ಆದರೆ, ರಾಣೇಬೆನ್ನೂರು ಕ್ಷೇತ್ರದ ವಿಚಾರ ಬೇರೆಯಿದೆ. ಅವರು ಅನರ್ಹರಾದರೆ ಮಾತ್ರ ನಮ್ಮ ವಿಚಾರ ಬರುತ್ತೆ. ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲು ವರಿಷ್ಠರು ಹೇಳಿದ್ದಾರೆ, ಅದಕ್ಕೆ ನಾವು ಬದ್ದ.
ಅವರ ಪರವಾಗಿ ತೀರ್ಪು ನೀಡಿದರೆ ಅವರು ಮತ್ತೆ ಶಾಸಕರಾಗುತ್ತಾರೆ. ಆವಾಗ ಚುನಾವಣೆ ಪ್ರಶ್ನೆ ಬರೋದಿಲ್ಲ. ಮತ್ತೆ ಅವರು ರಾಜೀನಾಮೆ ನೀಡಬೇಕಾಗುತ್ತೆ. ಹೀಗಾಗಿ ಈಗಲೇ ಯಾವುದೇ ಉಹಾಪೋಹಗಳಿಗೆ ಉತ್ತರ ನೀಡುವದಿಲ್ಲ ಎಂದು ಹಿರೇಕೆರೂರು ಪರಾಜಿತ ಅಭ್ಯರ್ಥಿಗಳಾದ ಡಾ.ಬಸವರಾಜ್ ಕೇಲಗಾರ ಮತ್ತು ಯು ಬಿ ಬಣಕಾರ ಟಿಕೇಟ್ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.