ETV Bharat / state

ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್: ಗಂಡನ ಕ್ರೌರ್ಯ ಬಿಚ್ಚಿಟ್ಟ ಅಪೂರ್ವ - ಗಂಡನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ ಹಲ್ಲೆಗೊಳಗಾಗಿದ್ದ ಪತ್ನಿ

ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಆ ವೇಳೆ ಆತ ನನಗೆ ದೈಹಿಕ ಕಿರುಕುಳ ನೀಡಿದ್ದ. ಅದರ ವಿಡಿಯೋ ಇಟ್ಟುಕೊಂಡು ವಿವಾಹವಾದ ಎಂಬ ಗಂಭೀರ ಆರೋಪ ಮಾಡಿದ್ದಾರೆ ಹಲ್ಲೆಗೊಳಗಾದ ಮಹಿಳೆ.

ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್
ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್
author img

By

Published : Mar 14, 2022, 3:24 PM IST

Updated : Mar 14, 2022, 6:18 PM IST

ಹುಬ್ಬಳ್ಳಿ: ಇತ್ತೀಚೆಗೆ ಗದಗದಲ್ಲಿ ಗೃಹಿಣಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಪತಿಯ ಕ್ರೌರ್ಯ ಬಿಚ್ಚಿಟ್ಟ ಪತ್ನಿ: ಹೌದು, ಘಟನೆಯ ಬಗ್ಗೆ ಸಂತ್ರಸ್ತೆ ಅಪೂರ್ವ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆಂದು ಹುಬ್ಬಳ್ಳಿಯಲ್ಲಿ ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಆ ವೇಳೆ ಆತ ನನಗೆ ದೈಹಿಕ ಕಿರುಕುಳ ನೀಡಿದ್ದ. ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ದ. ಘಟನೆ ಬಗ್ಗೆ ತಾಯಿ ಹಾಗೂ ಮತ್ತಿತರರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದ. ಅನಿವಾರ್ಯವಾಗಿ ನಾನು ಮದುವೆಯಾಗುವುದಕ್ಕೆ ಒಪ್ಪಿಕೊಂಡೆ. ಇದಾದ ನಂತರ ವಿಜಯಪುರಕ್ಕೆ ಕರೆದೊಯ್ದು ನನ್ನನ್ನು ಇಜಾಜ್ ವಿವಾಹವಾದ. ಮದುವೆ ಆಗುತ್ತಿದ್ದಂತೆಯೇ ತನ್ನ ಮತ್ತೊಂದು ಮುಖ ತೋರಿಸಲಾರಂಭಿಸಿದ. ತನ್ನ ಧರ್ಮಕ್ಕೆ ಧರ್ಮಾಂತರ ಮಾಡಿಕೊಂಡರಷ್ಟೇ ಸಂಸಾರ ಮಾಡುತ್ತೇನೆ ಅಂದ. ಅನಿವಾರ್ಯವಾಗಿ ನಾನು ಧರ್ಮಾಂತರಗೊಂಡೆ ಎಂದು ಕಣ್ಣೀರು ಹಾಕಿದ್ದಾರೆ.

ದಂಪತಿ
ದಂಪತಿ

ಇದನ್ನೂ ಓದಿ: ನವೀನ್ ಮೃತದೇಹ ತರುವ ಬಗ್ಗೆ ದಿಲ್ಲಿ ಅಧಿಕಾರಿಗಳ ಜೊತೆ ಮಾತಾಡಿ ಸದನಕ್ಕೆ ಮಾಹಿತಿ ಕೊಡಿ: ಸರ್ಕಾರಕ್ಕೆ ಸಭಾಪತಿ ಸೂಚನೆ

ನಿತ್ಯ ಪ್ರಾರ್ಥನೆ ಮಾಡುವಂತೆ ಒತ್ತಾಯಿಸುತ್ತಿದ್ದ, ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದ. ಮಗು ಹುಟ್ಟಿದ ನಂತರ ಅವನಿಗೂ ನಾನ್ ವೆಜ್ ಬಾಯಲ್ಲಿ ಇಟ್ಟು ತಿನ್ನುವಂತೆ ಪೀಡಿಸುತ್ತಿದ್ದ. ನನ್ನನ್ನು ಇಜಾಜ್ ಹಿಪ್ನಟೈಜ್ ಮಾಡಿ ತನ್ನಂತೆ ಕೇಳುವಂತೆ ಮಾಡಿದ್ದ. ಅವರ ಮನೆಯಲ್ಲಿ ನಾನು ಇಜಾಜ್ ಮಾತನ್ನು ಮಾತ್ರ ಕೇಳುತ್ತಿದ್ದೆ. ನಿತ್ಯ ಕಿರುಕುಳ ಕೊಟ್ಟರೂ ಹೇಗೋ ಸಂಸಾರ ಸಾಗಿಸುತ್ತಿದ್ದೆ. ಆದರೆ ಅವನಿಗೆ ಇನ್ನೊಂದು ಮದುವೆಯಾಗಿರೋದು, ಮೂವರು ಮಕ್ಕಳಿರುವುದು ಗಮನಕ್ಕೆ ಬಂತು ಎಂದು ದುಃಖದಿಂದಲೇ ನೋವು ತೋಡಿಕೊಂಡರು.

ಗಂಡನ ಕ್ರೌರ್ಯ ಬಿಚ್ಚಿಟ್ಟ ಅಪೂರ್ವ

ಇದೆಲ್ಲವನ್ನೂ ನೋಡಿದಾಗ ಲವ್ ಜಿಹಾದ್ ದುರುದ್ದೇಶ ಇಟ್ಟುಕೊಂಡಿದ್ದ ಅನ್ನಿಸುತ್ತದೆ. ಬೇರೆ ಹೆಣ್ಣುಗಳ ಜೊತೆ ಚೆಲ್ಲಾಟವಾಡುವ ಇಂಥವನಿಗೆ ಕಠಿಣ ಶಿಕ್ಷೆಯಾಗಬೇಕು, ಆತನನ್ನು ಜೈಲಿನಿಂದ ಬಿಟ್ಟರೆ ನನಗೆ, ನನ್ನ ಮಗ ಮತ್ತು ತಾಯಿಗೆ ತೊಂದರೆ ಇದೆ. ಹೀಗಾಗಿ ಅವನನ್ನು ಜೈಲಿನಿಂದ ಹೊರಗೆ ಬಿಡದೆ, ಗಲ್ಲಿಗೇರಿಸಬೇಕು ಎಂದು ಅಪೂರ್ವ ಒತ್ತಾಯಿಸಿದ್ದಾರೆ.

Last Updated : Mar 14, 2022, 6:18 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.