ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಕೈಕ ರೈಲ್ವೆ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಆರಂಭವಾಗಿ ಮೂರು ತಿಂಗಳಲ್ಲಿಯೇ ಮಹತ್ತರ ದಾಖಲೆ ಬರೆದಿದೆ.
![Hubballi Railway Museum is a great record in a short period of time](https://etvbharatimages.akamaized.net/etvbharat/prod-images/kn-hbl-05-railway-museum-av-720809_02122020153308_0212f_1606903388_434.jpg)
ರೈಲ್ವೆ ಇಲಾಖೆಯ ನಡೆದು ಬಂದ ಹಾದಿಯನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಹಾಗೂ ರೈಲ್ವೆಯ ಐತಿಹಾಸಿಕ ಗತವೈಭವ ಸಾರುವ ಉದ್ದೇಶ ಹೊಂದಿದೆ. 186 ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆ ಕಾಲಕ್ರಮೇಣ ಕಂಡ ಬದಲಾವಣೆಗಳು, ಬಂದ ಹೊಸತನಗಳ ಬಗ್ಗೆ ವಸ್ತು ಸಂಗ್ರಹಾಲಯದಲ್ಲಿ ಮಾಹಿತಿ ದಾಖಲಿಸಲಾಗಿದೆ. ಈ ರೈಲ್ವೆ ವಸ್ತು ಸಂಗ್ರಹಾಲಯ ಆರಂಭವಾಗಿ ಮೂರು ತಿಂಗಳು ಕಳೆದಿದ್ದು, ಈ ಅಲ್ಪ ಸಮಯದಲ್ಲಿಯೇ 24 ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ. ಆಗಸ್ಟ್‌ನಲ್ಲಿ 2,683 ಜನ ವೀಕ್ಷಿಸಿದ್ದರು. ಇದುವರೆಗೆ ಭೇಟಿ ನೀಡಿದವರಲ್ಲಿ ಸುಮಾರು ಐದು ಸಾವಿರ ಜನ ಮಕ್ಕಳೇ ಇರುವುದು ಮತ್ತೊಂದು ವಿಶೇಷ.
![Hubballi Railway Museum is a great record in a short period of time](https://etvbharatimages.akamaized.net/etvbharat/prod-images/kn-hbl-05-railway-museum-av-720809_02122020153308_0212f_1606903388_1099.jpg)
ನಿತ್ಯ 140ರಿಂದ 150 ಜನ ವಸ್ತು ಸಂಗ್ರಹಾಲಯಕ್ಕೆ ಬರುತ್ತಿದ್ದು, ವಾರಾಂತ್ಯದಲ್ಲಿ ದಿನವೊಂದಕ್ಕೆ 400 ಜನ ಬರುತ್ತಿದ್ದಾರೆ. ಆಗಸ್ಟ್‌ನಲ್ಲಿ 2,683 ಜನ ಭೇಟಿ ನೀಡಿದ್ದು, 1,373 ಜನ ಸಣ್ಣ ರೈಲಿನಲ್ಲಿ ಸಂಚರಿಸಿದ್ದಾರೆ. ನವೆಂಬರ್ನಲ್ಲಿ 6,628 ಜನ ಭೇಟಿ ನೀಡಿದ್ದಾರೆ. ಈ ವಸ್ತು ಸಂಗ್ರಹಾಲಯ ಮಧ್ಯಾಹ್ನ 12ರಿಂದ ಸಂಜೆ 7 ಗಂಟೆ ತನಕ, ವಾರಾಂತ್ಯದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.
![Hubballi Railway Museum is a great record in a short period of time](https://etvbharatimages.akamaized.net/etvbharat/prod-images/kn-hbl-05-railway-museum-av-720809_02122020153308_0212f_1606903388_965.jpg)
ಇದನ್ನೂ ಓದಿ: ಮೈಸೂರು ರೈಲು ನಿಲ್ದಾಣಕ್ಕೆ ಬಂದ 'ಕಾಮನ್ ಮ್ಯಾನ್'... ಹೊಸ ಆಕರ್ಷಣೆಯಾದ ಆರ್.ಕೆ. ಲಕ್ಷ್ಮಣ್ ಕಲಾಕೃತಿ
ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. ಪ್ರತಿ ಸೋಮವಾರ ರಜೆ ನಿಗದಿಪಡಿಸಿದ್ದು, ಹುಬ್ಬಳ್ಳಿ ಜನತೆಗೆ ಮಾತ್ರವಲ್ಲದೇ ಉತ್ತರ ಕರ್ನಾಟಕದ ಪ್ರವಾಸಿಗರಿಗೂ ಈ ತಾಣ ಕೈಬೀಸಿ ಕರೆಯುತ್ತಿದೆ. ಉತ್ತರ ಕರ್ನಾಟಕದ ಮೊದಲ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆ ಪಡೆದಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಮನ್ನಣೆ ಪಡೆಯುವ ಸಾಧ್ಯತೆ ಹೆಚ್ಚಿವೆ.