ETV Bharat / state

ಕೈ ಅಭ್ಯರ್ಥಿಗೇ ಧಾರವಾಡ ಜಿ.ಪಂ ಅಧ್ಯಕ್ಷ ಸ್ಥಾನ: ಅನೀಲ್​ ಕುಮಾರ್​ ಪಾಟೀಲ್​

ಧಾರವಾಡ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಂಡೆನೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಅಲ್ಲದೇ ಸದಸ್ಯರಿಗೆ ವಿಪ್​ ಕೂಡ ಜಾರಿ ಮಾಡಲಾಗುತ್ತದೆ ಎಂದು ಅನೀಲ್​ ಕುಮಾರ್​ ಪಾಟೀಲ್​ ತಿಳಿಸಿದ್ದಾರೆ.

ಅನೀಲ್​ ಕುಮಾರ್​ ಪಾಟೀಲ
author img

By

Published : Feb 19, 2019, 5:30 PM IST

ಹುಬ್ಬಳ್ಳಿ: ನಾಳೆ ನಡೆಯುವ ಧಾರವಾಡ ಜಿಲ್ಲಾ ಪಂಚಾಯತ್​​ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿಯೇ ಅಲಂಕರಿಸಲಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲ್​ ಕುಮಾರ್​ ಪಾಟೀಲ್​ ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಂಡನೆಯಾಗಿದ್ದು, ನಾಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಅಲ್ಲದೇ ಸದಸ್ಯರಿಗೆ ವಿಪ್​ ಕೂಡ ಜಾರಿ ಮಾಡಲಾಗುತ್ತದೆ ಎಂದರು.

ಶಕ್ತಿ ನೋಂದಣಿ ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿದ್ದು, 37 ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಧಾರವಾಡ ಜಿಲ್ಲೆ 6ನೇ ಸ್ಥಾನದಲ್ಲಿದೆ. ಬೂತ್ ಕವರೇಜ್​ನಲ್ಲಿ 871 ಬೂತ್​​ಗಳಿದ್ದು, ಇದರಲ್ಲಿ ಧಾರವಾಡ ಜಿಲ್ಲೆ 100% ಸಂಪೂರ್ಣವಾಗಿ ಪೂರೈಸಿದೆ. ಅಲ್ಲದೇ ಒಟ್ಟು ರಾಜ್ಯಾದ್ಯಂತ ನಾಲ್ಕು ಕಾಂಗ್ರೆಸ್ ಝೋನ್​ಗಳಿವೆ. ಬೆಳಗಾವಿ ವಲಯದಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ಅಭಿನಂದನಾರ್ಹ ಎಂದು ಪಾಟೀಲ್​ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಈಗಾಗಲೇ 18 ವಾಟ್ಸ್ಯಾಪ್​ ಹಾಗೂ ಫೇಸ್‌ಬುಕ್‌ ಅಕೌಂಟ್ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಹಭಾಗಿತ್ವ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ. ಇಂದಿರಾ ನೋಂದಣಿ ಅಭಿಯಾನದಲ್ಲಿ 8094767899 ನಂಬರಿಗೆ ಮಿಸ್ ಕಾಲ್ ಕೊಡುವ ಮೂಲಕ ಇಂದಿರಾ ಅಭಿಯಾನದಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

Intro:Body:

hubballi news

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.