ಧಾರವಾಡ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡದ ಮಸೀದಿಗಳಲ್ಲಿರುವ ಮೌಲ್ವಿಗಳನ್ನು ವಿಚಾರಣೆಗೊಳಪಡಿಸಿ ಎಂದು ಶಾಸಕ ಅರವಿಂದ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಶಾಂತಿ ಕಾಪಾಡುವಂತೆ ಮನವಿ ಮಾಡುವ ಬದಲು, ಇಂತಹ ಹೇಳಿಕೆ ಕೊಟ್ಟಿದ್ದಾರೆ. ಅವಳಿ ನಗರದ ಮಸೀದಿಗಳಲ್ಲಿನ ಮೌಲ್ವಿಗಳ ಹಿನ್ನೆಲೆ ತಿಳಿದುಕೊಳ್ಳುವಂತೆ ಗೃಹಮಂತ್ರಿಗೆ ಅವರು ಸಲಹೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ರಿಂಗ್ ಮಾಸ್ಟರ್ ಮಹಾನಾಯಕ ಆಗಿರಬಹುದೇ? ಮೀರ್ಸಾದಿಕ್ ಆಗಿರಬಹುದೇ?: ಬಿಜೆಪಿ
ಉತ್ತರ ಪ್ರದೇಶದಿಂದ ಬರುವ ಮೌಲ್ವಿಗಳು ದ್ವೇಷ ಬಿತ್ತುತ್ತಿದ್ದಾರೆ. ಅವರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಾರೆ. ಉತ್ತರ ಪ್ರದೇಶದ ದೇವಬಂದ ಎನ್ನುವ ಊರಿನಿಂದ ತರಬೇತಿ ಪಡೆದು ರಾಜ್ಯಕ್ಕೆ ಬರುವ ಮೌಲ್ವಿಗಳ ಇತಿಹಾಸ ಕೆದಕಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.