ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳ ಪೈಕಿ, ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಹೊಸ ಮೀಸಲಾತಿ ಪ್ರಕಟಿಸಿದೆ.
ಈ ಬಗ್ಗೆ ರಾಜ್ಯಪತ್ರವನ್ನು ಹೊರಗೆ ಹಾಕಲಾಗಿದೆ. ಈ ಹಿಂದೆ ಸಲ್ಲಿಸಿದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆದು, ಹೊಸದಾಗಿ ಮೀಸಲಾತಿಯನ್ನು ಪ್ರಕಟ ಮಾಡಲಾಗಿದ್ದು, ಬಹುತೇಕ ಮೊದಲ ಬಾರಿಗೆ ಹೊರಬಿದ್ದಂತಹ ಪಟ್ಟಿ ಇದಾಗಿದೆ.
ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ವಾರ್ಡ್ಗಳನ್ನು ಘೋಷಣೆ ಮಾಡಿ ಮೀಸಲಾತಿ ಕೂಡಾ ಬಿಡುಗಡೆ ಮಾಡಲಾಗಿತ್ತು. ನಂತರ ಈ ಕುರಿತು ತಕರಾರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಸದ್ಯ ಎಲ್ಲವೂ ಮುಗಿಸಿದ್ದು, ಹೀಗಾಗಿ ಲಿಸ್ಟ್ ಅನ್ನು ಫೈನಲ್ ಮಾಡಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಕೆ ಮಾಡಿದರು.