ETV Bharat / state

ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಶೇ. 53.81ರಷ್ಟು ವೋಟಿಂಗ್​​ - ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿದ್ದು, ಬರುವ 6ನೇ ತಾರೀಖಿನಂದು ಫಲಿತಾಂಶ ಬಹಿರಂಗಗೊಳ್ಳಲಿದೆ.

Hubballi-Dharwad Municipal Corporation
Hubballi-Dharwad Municipal Corporation
author img

By

Published : Sep 4, 2021, 2:24 AM IST

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿತು. ಒಟ್ಟು 8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಿದ್ದು, ಶೇ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರು ತಿಳಿಸಿದ್ದಾರೆ.

82 ವಾರ್ಡ್​​ಗಳಲ್ಲಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ 292 ಸೂಕ್ಷ್ಮ, 93 ಅತೀಸೂಕ್ಷ್ಮ ಮತ್ತು 457 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿಯೂ ಶಾಂತಿಯುತವಾಗಿ ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಳಿದಂತೆ ಬೆಳಗಾವಿಯಲ್ಲಿನ 58 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 50.41ರಷ್ಟು ಹಾಗೂ ಕಲಬುರಗಿಯಲ್ಲಿನ 55 ವಾರ್ಡ್​ಗಳಲ್ಲಿ ಶೇ. 47.77ರಷ್ಟು ವೋಟಿಂಗ್​ ಆಗಿದೆ. ಕೊರೊನಾ ಸೋಂಕಿನ ಕಾರಣ ಎಲ್ಲ ಪಾಲಿಕೆಗಳಲ್ಲಿ ನಿರಸ ವೋಟಿಂಗ್​​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.