ಹುಬ್ಬಳ್ಳಿ: ವಾಣಿಜ್ಯ ನಗರಿಯ ಸೈಕ್ಲಿಸ್ಟ್ ಒಬ್ಬರು ಸೈಕ್ಲಿಂಗ್ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಮೀಪ ನಡೆದಿದೆ.
ಹುಬ್ಬಳ್ಳಿಯ ಬಸವಗೌಡ ಶಂಕರಗೌಡ ಶಿವಳ್ಳಿ (35) ಮೃತರಾಗಿದ್ದು, ಇವರು ಬಿವಿಬಿ ಕಾಲೇಜಿನಲ್ಲಿ ಉಪನ್ಯಾಶಕರಾಗಿದ್ದರು. ಅಲ್ಲದೆ ಹಲವಾರು ವರ್ಷಗಳಿಂದ ಸೈಕ್ಲಿಸ್ಟ್ ಆಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಬಡ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹಾಗೂ ಸಮಾಜ ಸೇವೆಗಾಗಿ ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
![hubballi-cyclist-died-by-heart-attack-in-competition](https://etvbharatimages.akamaized.net/etvbharat/prod-images/13033049_thsws.jpg)
ಇಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಯೋಜಿಸಿದ್ದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಿಗ್ಗಾಂವಿ ಬಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
![Hubballi cyclist died by heart attack in competition](https://etvbharatimages.akamaized.net/etvbharat/prod-images/kn-hbl-03-cycling-maduvaga-saavu-av-ka10025_11092021134019_1109f_1631347819_881.jpg)
ಹೃದಯಾಘಾತವಾದ ಕೂಡಲೇ ಇತರ ಸ್ಪರ್ಧಿಗಳು ಬಸವಗೌಡ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಅಂತ್ಯಕ್ರಿಯೆ ಇಂದು ಸಂಜೆ ಹುಬ್ಬಳ್ಳಿ ಗೋಕುಲ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಅಪ್ಪ-ಅಮ್ಮನನ್ನು ಫ್ಲೈಟ್ನಲ್ಲಿ ಕರೆದೊಯ್ದ ನೀರಜ್ ಚೋಪ್ರಾ.. ಒಲಿಂಪಿಕ್ಸ್ ಚಿನ್ನದ ಹುಡುಗನ ಕನಸು ನನಸು