ETV Bharat / state

ಗ್ರಾಮದೇವಿ ಜಾತ್ರೆಗಾಗಿ ಊರು ತೊರೆಯುವ ಜನ.. ರಾಜ್ಯದ ಜನರ ಗಮನ ಸೆಳೆಯುತ್ತೆ ಈ ಹೊರವಾರ ಆಚರಣೆ - ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಾಲಯ

ಕಲಘಟಗಿಯ ಗ್ರಾಮದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆ ಎನಿಸಿಕೊಂಡಿದೆ. ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕಲಘಟಗಿ ಗ್ರಾಮದೇವಿ ಜಾತ್ರೆ
ಕಲಘಟಗಿ ಗ್ರಾಮದೇವಿ ಜಾತ್ರೆ
author img

By

Published : Feb 8, 2023, 7:42 AM IST

ಕಲಘಟಗಿ ಗ್ರಾಮದೇವಿ ಜಾತ್ರೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಯೊಂದು ಹಬ್ಬ, ಜಾತ್ರೆಗಳನ್ನು ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆಗೆ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಈ ಜಾತ್ರೆಗೋಸ್ಕರ ಇಡೀ ಊರಿಗೆ ಊರೇ ಖಾಲಿಯಾಗುತ್ತೆ. ಮನೆ ಬಾಗಿಲಿಗೆ ಬೀಗ ಹಾಕುವ ಜನರು ಊರನ್ನು ತೊರೆಯುತ್ತಾರೆ. ಕಲಘಟಗಿಯ ಗ್ರಾಮದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದು. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹೀಗೆ ಮೂರು ವರ್ಷಗಳಿಗೊಮ್ಮೆ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ ವಿಜೃಂಭಣೆಯಿಂದ ಜರುಗುತ್ತೆ.

ಈ ಬಾರಿ ಮಾರ್ಚ್ 1ರಿಂದ 9ರವರೆಗೆ ಗ್ರಾಮದೇವಿ ಜಾತ್ರೆ ನಡೆಯಲಿದೆ. ಜಾತ್ರೆಗಾಗಿ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ. ಸಾವಿರಾರು ಜನರು ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ. ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ.

ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ. ಜನರು ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರೂ ಈ ಸಂಪ್ರದಾಯ ಪಾಲಿಸುತ್ತಾರೆ.

ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲನೆ : ಸರ್ವ ಧರ್ಮೀಯರು ಮನೆ ತೊರೆದು ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲಿಸುತ್ತಾರೆ. ಬೆಳಗ್ಗೆ 10ರಿಂದ ಸಂಜೆ 4:30 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಈ ಆಚರಣೆ ನಡೆಯುತ್ತೆ. ಮೂರು ಮಂಗಳವಾರ ಮತ್ತು ಶುಕ್ರವಾರಗಳನ್ನು ಹೊರವಾರವೆಂದು ಆಚರಿಸುವುದು ಇಲ್ಲಿನ ಸಂಪ್ರದಾಯ.

ಹೊರವಾರ ಎಂದರೇನು? : ಜನರು ಉದ್ಯಾನಗಳಲ್ಲಿ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತವೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ. ಈ ದಿನಗಳಲ್ಲಿ ಪಟ್ಟಣ ಸಂಪೂರ್ಣ ಖಾಲಿ ಖಾಲಿಯಾಗಿರುತ್ತೆ‌. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ ಎಂದು ನಂಬಲಾಗಿದೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂದು ಜನರು ನಂಬುತ್ತಾರೆ. ಹೀಗಾಗಿ ಮನೆಗಳನ್ನು ತೊರೆದು ಊರ ಹೊರಗೆ ವಾಸ್ತವ್ಯ ಹೂಡುತ್ತಾರೆ. ಇದನ್ನೇ ಹೊರವಾರ ಎಂದು ಕರೆಯುತ್ತಾರೆ.

ಊರಿನ ಜನರನ್ನು ದೇವಿ ರಕ್ಷಿಸುತ್ತಿತ್ತಾಳೆಂಬ ನಂಬಿಕೆ : ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಎನ್ನುವ ಶಕ್ತಿ ದೇವತೆಗಳಿದ್ದಾರೆ. ಈ ಮೂವರು ಸಹೋದರಿಯರು ಅನಾದಿಕಾಲದಿಂದಲೂ ಊರಿನ ಜನರನ್ನು ರಕ್ಷಿಸುತ್ತಿದ್ದಾರೆ ಅನ್ನೋ ನಂಬಿಕೆಯಿದೆ. ದ್ಯಾಮವ್ವ ದೇವಿಯನ್ನು ಕೆಂಪು ಬಣ್ಣದಿಂದ, ದುರ್ಗವ್ವ ದೇವಿಯನ್ನು ಹಸಿರು ಬಣ್ಣದಲ್ಲಿ ಮೂರು ಮುಖದವ್ವಳಿಗೆ ಕೆಂಪು, ಹಸಿರು ಮತ್ತು ಹಳದಿ ಬಣ್ಣದಲ್ಲಿ ಚಿತ್ರಿಸುವ ವಾಡಿಕೆಯಿದೆ.

ಹೊರವಾರ ಆಚರಣೆಯ ನಂತರ ದೇವತೆಗಳಿಗೆ ಹೊಸ ಬಣ್ಣದ ಲೇಪನವನ್ನು ಮಾಡಲಾಗುತ್ತೆ. ಮಾರ್ಚ್ 1 ರಂದು ದ್ಯಾಮವ್ವ ಮತ್ತು ದುರ್ಗವ್ವ ದೇವಿಯ ಮೂರ್ತಿಗಳನ್ನು ಅಕ್ಕಿಓಣಿಯ ಚೌತಮನೆ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಗುತ್ತೆ. ಒಂಭತ್ತು ದಿನಗಳ ಕಾಲ ಸಂಗೀತ, ಭಜನೆ, ಕೀರ್ತನೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ಗಾಣಿಗ ಸಮಾಜದವರು ದೇವತೆಗಳ ಮುಂದೆ ಅಕ್ಕಿಯ ರಾಶಿಯನ್ನು ಇರಿಸಿ ಹಗಲಿರುಳು ದೀಪ ಬೆಳಗಿಸುತ್ತಾರೆ.

ಸಜ್ಜನರನ್ನು ರಕ್ಷಿಸಲು ದೇವತೆಗಳನ್ನು ಪ್ರಾರ್ಥಿಸುವ ಭಕ್ತರು: ಒಂಭತ್ತನೇ ದಿನ, ದೇವತೆಗಳ ಮುಂದೆ ಹುಲ್ಲಿನ ಗುಡಿಸಲು ಮಾಡಿ ಅದರಲ್ಲಿ ಹಿಟ್ಟಿನಿಂದ ಮಾಡಿದ ಕೋಣವನ್ನು ಇಟ್ಟು ಸುಡಲಾಗುತ್ತೆ. ದುಷ್ಟತನವನ್ನು ನಿಗ್ರಹಿಸಿ ಸಜ್ಜನರನ್ನು ರಕ್ಷಿಸಲು ಭಕ್ತರು ದೇವತೆಗಳನ್ನು ಪ್ರಾರ್ಥಿಸುತ್ತಾರೆ. ಕೊನೆಯ ದಿನ ದೇವತೆಗಳ ವಿಗ್ರಹಗಳನ್ನು ತಂದು ಬೆಂಡಿಗೇರಿ ಸರಹದ್ದಿನ ಪಾದಗಟ್ಟಿಯ ಮೇಲೆ ಇರಿಸುತ್ತಾರೆ‌. ಮಧ್ಯರಾತ್ರಿಯವರೆಗೆ ದೇವತೆಗಳನ್ನು ಪೂಜಿಸಿ ನಂತರ ವಿಗ್ರಹಗಳನ್ನು ವಿಸರ್ಜಿಸುತ್ತಾರೆ.

ರಾಜ್ಯದ ಜನರ ಗಮನ ಸೆಳೆಯುತ್ತಿರುವ ಜಾತ್ರೆ: ಜಾತ್ರೆಯ ನಂತರ ದ್ಯಾಮವ್ವ ಮತ್ತು ದುರ್ಗವ್ವ ದೇವತೆಗಳು ಭೂಮಿಯನ್ನು ತೊರೆಯುತ್ತಾರೆ. ನಂತರ ಮತ್ತೆ ಯುಗಾದಿಯಂದು ಜನಿಸುತ್ತಾರೆ ಎನ್ನುವ ಪ್ರತೀತಿಯಿದೆ‌. ಹೀಗಾಗಿ ಯುಗಾದಿಯವರೆಗಿನ ಅವಧಿಯನ್ನು ಕಲಘಟಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸೂತಕ ಎಂದು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಯುಗಾದಿ ದಿನ ದೇವತೆಗಳನ್ನು ಪುನಃ ಪ್ರತಿಷ್ಠಾಪಿಸಿ ಉಡಿ ತುಂಬಲಾಗುತ್ತೆ. ನಂತರ ಎಲ್ಲಾ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತೆ. ಒಟ್ಟಾರೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಕಲಘಟಗಿ ಗ್ರಾಮದೇವಿ ಜಾತ್ರೆ ತನ್ನ ವಿಶೇಷ ಆಚರಣೆಗಳಿಂದ ರಾಜ್ಯದ ಜನರ ಗಮನ ಸೆಳೆಯುತ್ತೆ.

ಓದಿ : ತಿಂಥಣಿ: ಕೈಲಾಸ ಕಟ್ಟೆಯಲ್ಲಿ ಕುಳಿತು ಗಾಂಜಾ ಸೇದಿದ ಸಾಧುಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.