ಹುಬ್ಬಳ್ಳಿ: ಆಯುಷ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಸತ್ಯ ಸಾಯಿ ಹೋಮಿಯೋಪತಿ ಮೆಡಿಕಲ್ ಕಾಲೇಜು ವತಿಯಿಂದ ಕೊರೊನಾ ವಾರಿಯರ್ಸ್ನ ಆರೋಗ್ಯ ವೃದ್ದಿಗಾಗಿ ಹೋಮಿಯೋಪತಿ ಔಷಧವನ್ನು ಸತ್ಯಸಾಯಿ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ.ಶರಣಪ್ಪ ಕೊಟಗಿ ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಪಾಲಿಕೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಕೊರೊನಾ ವಾರಿಯರ್ಸ್ಗೆ ಔಷಧಿ ಹಸ್ತಾಂತರಿಸಿದ ಅವರು, ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಆರೋಗ್ಯ ವೃದ್ದಿಯಾಗಬೇಕು. ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಹಾಗಾಗಿ ಅವರಿಗೆ ಹೋಮಿಯೋಪತಿ ಔಷಧಿ ವಿತರಣೆ ಮಾಡಲಾಗುತ್ತಿದೆ ಎಂದರು.
ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕರು ರೋಗದ ಬಗ್ಗೆ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ , ಸ್ವಚ್ಚತೆ ಬಗ್ಗೆ ಗಮನ ಕೊಡಬೇಕು. ಅಲ್ಲದೇ ಪ್ರತಿಯೊಬ್ಬರೂ ಸ್ವತಃ ತಾವೇ ಲಕ್ಷ್ಮಣ ರೇಖೆ ಹಾಕಿಕೊಂಡು ಕೊರೊನಾ ಹೊಡೆದೋಡಿಸಲು ಸಹಾಯ ಮಾಡಬೇಕೆಂದು ಮನವಿ ಮಾಡಿದರು.
ಇನ್ನು ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಆಯುಷ್ಯ ಫೆಡರೇಷನ್ ಆಫ್ ಇಂಡಿಯಾದ ಡಾ. ಶ್ರೀನಿವಾಸ ಬನ್ನಿಗೌಡರು, ಡಾ.ರವೀಂದ್ರ ವಾಯ್, ಡಾ.ಸಂದೀಪ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.