ETV Bharat / state

ತಜ್ಞರ ಸಲಹೆ ಪಡೆದು ನೈಟ್ ಕರ್ಫ್ಯೂ ಜಾರಿ‌ ಮಾಡಲಾಗಿದೆ: ಬಸವರಾಜ ಬೊಮ್ಮಾಯಿ - Home Minister Basavaraja Bommai

ಸಾರ್ವಜನಿಕರಿಗೆ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗಬಾರದು, ಅದನ್ನ ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನವರಿ 2ರ ವರೆಗೆ ಮಾತ್ರ ಈ ನೈಟ್ ಕರ್ಫ್ಯೂ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

home-minister-basavaraja-bommayi-talk
ಬಸವರಾಜ ಬೊಮ್ಮಾಯಿ
author img

By

Published : Dec 24, 2020, 3:44 PM IST

ಹುಬ್ಬಳ್ಳಿ: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ, ಸಾರ್ವಜನಿಕರಿಗೆ ಕರ್ಫ್ಯೂದಿಂದ‌ ತೊಂದರೆ ಆಗುವುದು ಸಹಜ. ಆದರೆ, ಸಾರ್ವಜನಿಕರು ದಿನದ‌ ಕೆಲ ಗಂಟೆ ಕೊರೊನಾದಿಂದ ದೂರವಿರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ

ನಗರದಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರಿಗೆ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗಬಾರದು. ಅದನ್ನ ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನವರಿ 2ರ ವರೆಗೆ ಮಾತ್ರ ಈ ನೈಟ್ ಕರ್ಫ್ಯೂ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.

ಓದಿ: ಕೊರೊನಾ ರೂಪಾಂತರ ವೈರಸ್​​​​​​​​​​​​​ ಹಿನ್ನೆಲೆಯಲ್ಲಿ ನೈಟ್​ ಕರ್ಫ್ಯೂ.. ನಾವ್​ ಮೂವರೂ ಅಣ್ಣ-ತಮ್ಮಂದಿರು ಎಂದ ಸುಧಾಕರ್​

ಈ ಬಗ್ಗೆ ತಜ್ಞರ ಸಲಹೆ ಪಡೆದು ನೈಟ್ ಕರ್ಫ್ಯೂ ಜಾರಿ‌ ಮಾಡಲಾಗಿದ್ದು, ಕೆಲವರು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಸರ್ಕಾರ ನೀಡಿದ ಆದೇಶ ಪಾಲಿಸಲೇಬೇಕು.
ಕ್ರಿಸ್​​ಮಸ್ ಆಚರಣೆಗೆ ಅವಕಾಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಗೃಹ ಸಚಿವ ಬೊಮ್ಮಾಯಿ ಹಿಂದೇಟು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.