ETV Bharat / state

ಪಾಕ್​ ಪರ ಘೋಷಣೆ ಕೂಗಿದ್ದ ಆರೋಪಿಗಳ ಮೇಲೆ‌ ಹಲ್ಲೆಗೆ ಯತ್ನ - Hindu organaization activists attack on pro-Pak slogans students

ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮಿರ್, ಬಾಸಿತ್, ತಾಲಿಬ್​ನನ್ನು ಬಂಧಿಸಿ 3ನೇ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿ, ಜೈಲಿಗೆ ಕರೆದೊಯ್ಯುವಾಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ವಕೀಲರು ಆರೋಪಿಗಳ ವಿರುದ್ದ ಘೋಷಣೆ ‌ಕೂಗಿ ಆರೋಪಿಗಳ ಮೇಲೆ‌ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

attack
ಹಲ್ಲೆಗೆ ಯತ್ನ
author img

By

Published : Feb 17, 2020, 1:33 PM IST

Updated : Feb 17, 2020, 2:53 PM IST

ಹುಬ್ಬಳ್ಳಿ: ನಗರದ ಕೆಎಲ್​ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ‌ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳನ್ನು‌ ಕೋರ್ಟ್​ಗೆ ಹಾಜರುಪಡಿಸಿ‌ ಜೈಲಿಗೆ ಕರೆದುಕೊಂಡು ಹೋಗುವಾಗ ಕೋರ್ಟ್​ ಆವರಣದಲ್ಲಿ ಹೈಡ್ರಾಮ ಸೃಷ್ಟಿಯಾಗಿತ್ತು.

ಪಾಕ್​ ಪರ ಘೋಷಣೆ ಕೂಗಿದ್ದ ಆರೋಪಿಗಳ ಮೇಲೆ‌ ಹಲ್ಲೆಗೆ ಯತ್ನ

ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮಿರ್, ಬಾಸಿತ್, ತಾಲಿಬ್​ನನ್ನು ಬಂಧಿಸಿ 3ನೇ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿ, ಜೈಲಿಗೆ ಕರೆದೊಯ್ಯುವಾಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ವಕೀಲರು ಆರೋಪಿಗಳ ವಿರುದ್ಧ ಘೋಷಣೆ ‌ಕೂಗಿ ಆರೋಪಿಗಳ ಮೇಲೆ‌ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿ ಪೊಲೀಸರು ಹಿಂದೂಪರ‌ ಸಂಘಟನೆ ಕಾರ್ಯಕರ್ತರನ್ನು ಚದುರಿಸಲು ಹರಸಾಹಸಪಡಬೇಕಾಯಿತು.

ಇದೇ ವೇಳೆ ಹಿಂದೂ ಕಾರ್ಯಕರ್ತನೋರ್ವ ಪಾಕಿಸ್ತಾನ ಮುರ್ದಾಬಾದ್ ಎನ್ನುವ ಬದಲು ಆವೇಶ ಭರಿತವಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ ಪ್ರಸಂಗವು ನಡೆಯಿತು. ಆಗ ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಹಿಂದೂ‌ ಕಾರ್ಯಕರ್ತರನ್ನು ಚದುರಿಸಿ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕೂಡಿಸಿಕೊಂಡು ಸಬ್ ಜೈಲಿಗೆ ಬಿಟ್ಟು ಬಂದರು.

Last Updated : Feb 17, 2020, 2:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.