ಹುಬ್ಬಳ್ಳಿ: ಕಲಘಟಗಿ ತಾಲೂಕಿನಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ಬೇಗೂರ ಗ್ರಾಮದಲ್ಲಿ ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ.
ಸಂಜೆ ಪ್ರಾರಂಭವಾದ ಭಾರೀ ಬಿರುಗಾಳಿ ಮಳೆಗೆ ಮನೆಗಳ ಮೇಲ್ಛಾವಣಿಗೆ ಹಾಕಿದ್ದ ಶೀಟ್‍ಗಳು ಹಾರಿಹೋಗಿವೆ. ಆಹಾರ ಪಧಾರ್ಥಗಳು ದವಸ ಧಾನ್ಯಗಳು ಸೇರಿದಂತೆ ಬಟ್ಟೆ, ಇನ್ನಿತರೆ ವಸ್ತುಗಳು ಸಂಪೂರ್ಣವಾಗಿ ನೀರು ಪಾಲಾಗಿವೆ.