ಧಾರವಾಡ: ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ ವೀರಣ್ಣ ಬೋಳಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಶಾಲೆಯಲ್ಲಿ ಹೊಸ ವರ್ಷ ಆಚರಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಥಳಿತ ಆರೋಪ!
ಕೆಲವು ವಿದ್ಯಾರ್ಥಿಗಳು ಹಲವಾರು ತಿಂಗಳಿನಿಂದ ಡೆಸ್ಕ್ ಬದಲಾಯಿಸೋದು, ಹೊರಗಿಡೋದು ಮಾಡ್ತಾ ಇದ್ದರು. ತಿಳಿ ಹೇಳಿ ಸುಧಾರಿಸಲು ಪ್ರಯತ್ನಿಸಿದರೂ ಕೇಳಲಿಲ್ಲ. ಅದಕ್ಕೆ ಈ ರೀತಿ ಎಚ್ಚರಿಸಿದ್ದೇವೆ ಅಷ್ಟೆ. ಅದನ್ನು ಬಿಟ್ಟರೇ ಬೇರೇನು ಇಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವುದು ನಮ್ಮ ಕೆಲಸ. ಈ ಬಗ್ಗೆ ಮಕ್ಕಳ ಪಾಲಕರಿಗೂ ಪತ್ರ ಬರೆದು ಹೇಳಲಾಗಿದೆ. ಆದರೂ ಸುಧಾರಣೆ ಕಾಣಲಿಲ್ಲ, ಇದೇ ರೀತಿ ಮುಂದುವರೆದರೆ ಮುಂದೆ ಅನಾಹುತವಾಗಬಹುದು ಎಂದು ಎಚ್ಚರಿಕೆ ನೀಡಿದ್ದೇನೆ ಎಂದರು.