ಹುಬ್ಬಳ್ಳಿ: ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆ ಅರ್ಬನ್ ಇನ್ಫ್ರಾ ಕಮ್ಯುನಿಕೇಶನ್ ಗ್ರೂಪ್ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಸಮೂಹ ಸಾರಿಗೆ ವರ್ಗದಡಿ ನೀಡಲಾಗುವ 2022ನೇ ಸಾಲಿನ ಭಾರತದಲ್ಲಿಯೇ ಸಾರ್ವಜನಿಕರು ಅತಿ ಹೆಚ್ಚು ಬಳಸುವ ಬಿಆರ್‌ಟಿಎಸ್ ಸಾರಿಗೆ ಪ್ರಶಸ್ತಿಗೆ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್(ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಯೋಜನೆ ಭಾಜನವಾಗಿದೆ.
![HDBRTS wins another award](https://etvbharatimages.akamaized.net/etvbharat/prod-images/16897795_917_16897795_1668154068236.png)
ಸಮೂಹ ಸಾರಿಗೆ ವ್ಯವಸ್ಥೆಯ ಮೂಲಭೂತ ಸೌಕರ್ಯ, ಪ್ರಯಾಣಿಕರಿಗೆ ಕಲ್ಪಿಸಿದ ಅತ್ಯಾಧುನಿಕ ಸೌಲಭ್ಯ, ಪ್ರಯಾಣ ದರ, ಜನಸ್ನೇಹಿ ಮತ್ತು ಪರಿಸರ ಸ್ನೇಹಿ ಚಟುವಟಿಕೆ ಮತ್ತು ಭಾರತದ ಬಿಆರ್‌ಟಿಎಸ್ ಸಾರಿಗೆಯಲ್ಲಿ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಅನುಪಾತದ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗಿದೆ.
![HDBRTS wins another award](https://etvbharatimages.akamaized.net/etvbharat/prod-images/16897795_989_16897795_1668154034854.png)
ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ನ. 7 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತ ಮತ್ತು ಸರ್ಕಾರದ ಪದನಿಮಿತ್ತ ಅಪರ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ , ಹೆಚ್ಡಿಬಿಆರ್ಟಿಎಸ್ ಕಂ.ನಿ. (ಪ್ರಧಾನ ವ್ಯವಸ್ಥಾಪಕ ಐಟಿಎಸ್ ಕಾರ್ಯಾಚರಣೆ) ಎಂ. ರಾಜಕುಮಾರ ಮತ್ತು ಹುಬ್ಬಳ್ಳಿ - ಧಾರವಾಡ ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.
ಈವರೆಗೆ ಪಡೆದ ಪ್ರಶಸ್ತಿಗಳು:
- 2019ರಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉತ್ತಮ ನಗರ ಸಮೂಹ ಸಾರಿಗೆ ಯೋಜನೆಯಡಿ ವಸತಿ ಶ್ರೇಷ್ಠತಾ ಪ್ರಶಸ್ತಿ.
- 2020ರಲ್ಲಿ ಪರಿಸರ ಹಾಗೂ ಸುಸ್ಥಿರ ಸಾರಿಗೆ ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ವರ್ಣ ಪ್ರಶಸ್ತಿ.
- 2021 ರಲ್ಲಿ ಭಾರತ ಸರ್ಕಾರದ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉತ್ತಮ ನಗರ ಸಮೂಹ ಸಾರಿಗೆ ಯೋಜನೆಯಡಿ ಶ್ರೇಷ್ಠತಾ ಪ್ರಶಸ್ತಿಗೆ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಯೋಜನೆ ತನ್ನದಾಗಿಸಿಕೊಂಡಿತ್ತು. ಈಗ ಮತ್ತೊಂದು ಗರಿಮೆ ಸಿಕ್ಕಿದೆ.
ಇದನ್ನೂ ಓದಿ: ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿಎಂಆರ್ಸಿಎಲ್ ಸಂಸ್ಥೆಗೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ..