ಹುಬ್ಬಳ್ಳಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ ಎನ್ಐಎ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಶನಿವಾರ ನಸುಕಿನ ಜಾವ 4 ಗಂಟೆಗೆ ಸುಮಾರು ನಾಲ್ಕು ಗಂಟೆಗೆ ಎನ್ಐಎ 10 ಜನ ಅಧಿಕಾರಿಗಳ ತಂಡವೂ ಹಳೇ ಹುಬ್ಬಳ್ಳಿಯ ನುರಾನಿ ಪ್ಲಾಟ್ನ ಮನೆಯ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ನಂತರ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಡಿಪಿಐ ಕಚೇರಿಯಲ್ಲೂ ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಇಂದು ಬೆಳಗ್ಗೆ ಎನ್ಐಎ ಏಕಕಾಲಕ್ಕೆ ದಾಳಿ ನಡೆಸಿ, ಕೆಲವರನ್ನು ವಶಕ್ಕೆ ಪಡೆದಿದೆ.