ETV Bharat / state

ರಾಮನಗರದಲ್ಲಷ್ಟೇ ಜೈಲುಗಳಿಲ್ಲ: ಹೆಚ್​ಡಿಕೆ ಹೇಳಿಕೆಗೆ ಶೆಟ್ಟರ್​ ತಿರುಗೇಟು - ಸಚಿವ ಜಗದೀಶ್​ ಶೆಟ್ಟರ್

ಪಾದರಾಯನಪುರ ಗಲಭೆ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇಟ್ಟರೆ ಕೊರೊನಾ ಬರುತ್ತದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಜಗದೀಶ್​ ಶೆಟ್ಟರ್ ತಿರುಗೇಟು ನೀಡಿದ್ದಾರೆ.

fdef
ರಾಮನಗರದಲ್ಲಷ್ಟೇ ಜೈಲುಗಳಿಲ್ಲ: ಹೆಚ್​ಡಿಕೆ ಹೇಳಿಕೆಗೆ ಶೆಟ್ಟರ್​ ಟೀಕೆ
author img

By

Published : Apr 24, 2020, 4:10 PM IST

ಧಾರವಾಡ: ರಾಮನಗರ ಜೈಲಿನಲ್ಲಿ ಪಾದರಾಯನಪುರದ ಆರೋಪಿಗಳನ್ನು ಇಟ್ಟರೆ ಕೊರೊನಾ ಬರುತ್ತದೆ ಎಂಬ ಕುಮಾರಸ್ವಾಮಿಯವರ ಹೇಳಿಕೆ ತಪ್ಪು ಎಂದು ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ರಾಮನಗರದಲ್ಲಷ್ಟೇ ಜೈಲುಗಳಿಲ್ಲ: ಹೆಚ್​ಡಿಕೆ ಹೇಳಿಕೆಗೆ ಶೆಟ್ಟರ್​ ತಿರುಗೇಟು

ರಾಮನಗರದಲ್ಲಷ್ಟೇ ಜೈಲುಗಳಿಲ್ಲ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಯೋಚನೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಇನ್ನು ಜಿಲ್ಲೆಯಲ್ಲಿ ಕಿಮ್ಸ್ ಹಾಗೂ ಡಿಮಾನ್ಸ್​ನಲ್ಲಿ ಪ್ರತಿನಿತ್ಯ 90-100 ಜನರನ್ನು ಕೊರೊನಾ ತಪಾಸಣೆಗೊಳಪಡಿಸಲಾಗುತ್ತಿದೆ. ಈ ಮೊದಲು ಶಿವಮೊಗ್ಗ ಹಾಗೂ ಪುಣೆಗೆ ರಕ್ತ ಹಾಗೂ ಗಂಟಲು ದ್ರವದ ಮಾದರಿ ತಪಾಸಣೆಗಾಗಿ ಕಳುಹಿಸಲಾಗುತ್ತಿತ್ತು. ಇದರಿಂದ ವರದಿ ಬರುವುದು ತಡವಾಗುತ್ತಿತ್ತು. ಈಗ ನಮ್ಮ ಜಿಲ್ಲೆಯಲ್ಲಿ 2 ಲ್ಯಾಬ್​ ಇರುವುದರಿಂದ ಕೊರೊನಾ ಟೆಸ್ಟಿಂಗ್ ಚುರುಕಾಗಿದೆ ಎಂದಿದ್ದಾರೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.