ETV Bharat / state

ಮಠವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ: ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ - ಮೂರುಸಾವಿರ ಮಠದ ಉತ್ತರಾಧಿಕಾರದ ವಿವಾದ

ಶ್ರೀ ಮಠವು ಶಿವರಾತ್ರಿಯನ್ನು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದೆ. ಕೆಲವು ಸಂಪ್ರದಾಯಗಳನ್ನು ಮಠದಲ್ಲಿ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇವೆ. ಅಲ್ಲದೇ ಶಿವರಾತ್ರಿ ಸಂದರ್ಭ ಮಠವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದ್ದಾರೆ.

Gurusidda rajayogindra swamiji
ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ
author img

By

Published : Feb 22, 2020, 4:59 PM IST

ಹುಬ್ಬಳ್ಳಿ: ನಾನು ಈ ಮಠದ ಪೀಠಾಧಿಪತಿ. ಶಿವರಾತ್ರಿಯ ಸಂದರ್ಭ ಮಠವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮೌನ ಮುರಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾತ್ರಿ ಹಿಂದೂಗಳಿಗೆ ಪವಿತ್ರವಾದ ಹಬ್ಬ. ಶ್ರೀ ಮಠವು ಕೂಡ ಶಿವರಾತ್ರಿಯನ್ನು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದೆ. ಕೆಲವು ಸಂಪ್ರದಾಯಗಳನ್ನು ಮಠದಲ್ಲಿ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇವೆ. ಅಲ್ಲದೇ ಶಿವರಾತ್ರಿ ಸಂದರ್ಭ ಮಠದ ಪೀಠವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದರು.

ಕಳೆದ ಒಂದು ವಾರದಿಂದ ಮೂರುಸಾವಿರ ಮಠದ ಉತ್ತರಾಧಿಕಾರದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನಾನೇ ಮಠದ ಉತ್ತರಾಧಿಕಾರಿ ಎಂದು ಸತ್ಯದರ್ಶನಕ್ಕೆ ಆಹ್ವಾನ ನೀಡಿರುವ ಬೆನ್ನಲ್ಲೇ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಪರೋಕ್ಷವಾಗಿ ಮಠದ ಪೀಠ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಇದರ ನಡುವೆ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳು ಮಠದಲ್ಲಿ ಸಭೆ ನಡೆಸಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.