ಧಾರವಾಡ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ನವಲೂರ ಗ್ರಾಮದಲ್ಲಿ ಭಾರೀ ಘರ್ಷಣೆ ನಡೆದಿದೆ.
ಗಂಗಯ್ಯ ಹಿರೇಮಠ ಹಾಗೂ ಶಕುಂತಲಾ ಹಿರೇಮಠ ಎಂಬುವವರು ತಮ್ಮ ಹೊಲದಲ್ಲಿದ್ದಾಗ, ಚಂದ್ರಶೇಖರ ಹಿರೇಮಠ ಎನ್ನುವವರು ಬಂದು ಜಗಳವಾಡಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.
ಗ್ರಾಮದಲ್ಲಿ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ತಂತಿ ಬೇಲಿಯನ್ನು ತೆಗೆದು, ಕಾಂಪೌಂಡ್ ಕಟ್ಟಿಕೊಳ್ಳಿ ಎಂದು ಹೇಳಿದ್ದಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಘಟನೆ ಸಂಬಂಧ ದೂರು ದಾಖಲು ಮಾಡಿಕೊಂಡಿರುವ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.