ETV Bharat / state

ಕೋಗಿಲಗೇರಿಯಲ್ಲಿ ಧಾರವಾಡ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: ಗ್ರಾಮಸ್ಥರಿಂದ ಹೃದಯಪೂರ್ವಕ ಸ್ವಾಗತ - dc village stay programme

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆ ಇಂದು ಧಾರವಾಡ ಡಿಸಿ ನಿತೇಶ್ ಕೆ. ಪಾಟೀಲ ಅವರು ಕೋಗಿಲಗೇರಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿಸಿಗೆ ಊರಿನ ಜನ ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.

grand welcome to dharwad dc village stay
ಧಾರವಾಡ ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಸ್ವಾಗತ
author img

By

Published : Feb 20, 2021, 2:36 PM IST

ಧಾರವಾಡ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆ ಜಿಲ್ಲೆಯ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ವಾಸ್ತವ್ಯ ಹೂಡಲು ಆಗಮಿಸಿದರು.

ಧಾರವಾಡ ಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಸ್ವಾಗತ
ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಆರತಿ ಬೆಳಗಿ, ಉತ್ತರ ಕರ್ನಾಟಕ ಶೈಲಿಯ ಪೇಟ ತೊಡಿಸಿ ಸ್ವಾಗತಿಸಿದರು. ಅಲಂಕೃತ ಚಕ್ಕಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತಂದರು. ಜಿಲ್ಲಾಧಿಕಾರಿಗಳು ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ತೆರಳಿ, ಪಡಿತರ ವಿತರಣೆ ಪರಿಶೀಲಿಸಿದರು. ಸೀಮೆಎಣ್ಣೆ ಬೇಡಿಕೆ ಕುರಿತು ಗ್ರಾಮಸ್ಥರ ಅಹವಾಲು ಆಲಿಸಿ, ಸರ್ಕಾರದ ಅನುಮತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಪರಿಶಿಷ್ಟ ಜಾತಿಯ ಜನರ ಓಣಿಗೆ ಭೇಟಿ ನೀಡಿ, ರಸ್ತೆ, ಚರಂಡಿ ನಿರ್ಮಾಣ ಕುರಿತು ಜನರ ಮನವಿಗಳನ್ನು ಸ್ವೀಕರಿಸಿದರು. ಪೀರಪ್ಪ ಮರೆಪ್ಪ ಹುಲಸೇರ ಎಂಬ ಪಾರ್ಶ್ವವಾಯು ಪೀಡಿತನ ಮನೆ ಬಾಗಿಲಿಗೆ ತೆರಳಿ ಬಗರ್ ಹುಕುಂ ಸಾಗುವಳಿ ಭೂಮಿಯ ಹಕ್ಕುಪತ್ರ ವಿತರಣೆ ಕುರಿತು ಅಹವಾಲು ಆಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಕೋಗಿಲಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ವಾಸ್ತವ್ಯ ನೆನಪಿಗೆ ಸಸಿ ನೆಟ್ಟರು.

ಅರವಟಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಮೀನಾಬಾಯಿ ಕಾಶಿನಗುಂಟೆ, ಉಪವಿಭಾಗಾಧಿಕಾರಿ ,ತಹಶೀಲ್ದಾರ್​ ಅಮರೇಶ ಪಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.