ಹುಬ್ಬಳ್ಳಿ (ಧಾರವಾಡ): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಎಬಿವಿಪಿ ವತಿಯಿಂದ ಹುಬ್ಬಳ್ಳಿಯಲ್ಲಿಂದು 75 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆ ಭವ್ಯವಾಗಿ ನೆರವೇರಿತು.
ಮೂರುಸಾವಿರ ಮಠದ ಆವರಣದಿಂದ ಪ್ರಾರಂಭವಾದ ಮಹಾ ತಿರಂಗಾ ಯಾತ್ರೆ ದುರ್ಗದ ಬಯಲು, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಚೆನ್ನಮ್ಮ ವೃತ್ತ ತಲುಪಿ ಅಂತ್ಯಗೊಂಡಿತು. ಚಿನ್ಮಯ ಡಿಗ್ರಿ ಕಾಲೇಜು ಮತ್ತು ಶಾಲೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಯಾತ್ರೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯಾತ್ರೆಯುದ್ದಕ್ಕೂ ವಿದ್ಯಾರ್ಥಿಗಳು ಭಾರತ ಮಾತೆಗೆ ಸಿಂಧೂರ, ಬೋಲೋ ಭಾರತ್ ಮಾತಾಕಿ ಜೈ, ವಂದೇ ಭಾರತಂ, ಕಿತ್ತೂರು ರಾಣಿ ಚೆನ್ನಮ್ಮಾ ಕಿ ಜೈ, ಸಂಗೊಳ್ಳಿ ರಾಯಣ್ಣ ಕಿ ಜೈ, ಸ್ವಾತಂತ್ರ್ಯ ಹೋರಾಟಗಾರರಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಸಾಮಾಜಿಕ ಸಮಾನತೆ ಎಲ್ಲಿದೆ ಅಲ್ಲಿ ರಾಷ್ಟ್ರದ ಸುರಕ್ಷತೆಯಿದೆ, ಎಲ್ಲರೂ ರಾಷ್ಟ್ರಾಭಿಮಾನ ಹೊಂದಬೇಕೆಂದು ಯಾತ್ರೆ ಮೂಲಕ ಜನರಿಗೆ ತಿಳಿ ಹೇಳುವ ಕೆಲಸ ಮಾಡಿದರು. ಡೊಳ್ಳು ವಾದ್ಯಗಳೊಂದಿಗೆ ತ್ರಿವರ್ಣ ಮೆರವಣಿಗೆ ನಡೆದಿದ್ದು, ಹರ್ ಘರ್ ತಿರಂಗಾ ಹಿನ್ನೆಲೆ ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸುವಂತೆ ವಿದ್ಯಾರ್ಥಿಗಳು ಕರೆ ನೀಡಿದರು.
ಇದನ್ನೂ ಓದಿ: ಮನೆಯ ಬಾಲ್ಕನಿಯಲ್ಲಿ ನಿಂತು ರಾಷ್ಟ್ರಧ್ವಜ ಹಾರಿಸಿದ ಮಾಜಿ ಪ್ರಧಾನಿ ದೇವೇಗೌಡ