ETV Bharat / state

ಸುಸಜ್ಜಿತ ರೈಲ್ವೆ ಐಸೋಲೇಶನ್ ಕೋಚ್​ಗಳಿದ್ದರೂ ಬಳಸಿಕೊಳ್ಳದ ಸರ್ಕಾರ

ಒಂದು ಕೋಚ್​ನಲ್ಲಿ 16 ಸೋಂಕಿತರಿಗೆ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ವೆಂಟಿಲೇಟರ್​​, ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಇಲಾಖೆ ಯೋಜಿಸಿದೆ..

author img

By

Published : May 17, 2021, 12:43 PM IST

Govt Not Using Railway Isolation Coaches
ರೈಲ್ವೆ ಐಸೋಲೇಶನ್ ಕೋಚ್​ಗಳನ್ನು ಬಳಸಿಕೊಳ್ಳದ ಸರ್ಕಾರ

ಹುಬ್ಬಳ್ಳಿ : ಕೋವಿಡ್ ಸಮಯದಲ್ಲಿ ಸೋಂಕಿತರಿಗೆ ಬೆಡ್​ ಕೊರತೆಯಾಗಬಾರದೆಂದು ಸರ್ಕಾರ ರೈಲ್ವೆ ಕೋಚ್​ಗಳನ್ನು ಐಸೋಲೇಶನ್ ವಾರ್ಡ್​ಗಳಾಗಿ ಪರಿವರ್ತಿಸಿತ್ತು. ಆದರೆ, ಈ ವಿಶೇಷ ಕೋಚ್​​ಗಳು ಇದೀಗ ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಕೋವಿಡ್ ಸೋಂಕಿತರು ಸರಿಯಾಗಿ ಬೆಡ್​ ಸಿಗದೆ ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ರೆಡಿಯಾಗಿರುವ ರೈಲ್ವೆ ಕೋಚ್​ಗಳನ್ನು ಬಳಸಿಕೊಂಡರೆ ಬೆಡ್​ ಕೊರತೆ ನೀಗಿಸಬಹುದು. ಆದರೆ, ಸರ್ಕಾರ ಇರುವ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ.

ಸುಮಾರು 280 ಐಸೋಲೇಶನ್ ಕೋಚ್​ಗಳು ನೈರುತ್ಯ ರೈಲ್ವೆ ವಿಭಾಗದಲ್ಲಿ ರೆಡಿ ಇದೆ. ಈ ಪೈಕಿ ಹುಬ್ಬಳ್ಳಿಯ ವರ್ಕ್​ ಶಾಪ್​​ನಲ್ಲಿ 96 ಕೋಚ್​ಗಳನ್ನು ಐಸೋಲೇಶನ್ ಕೋಚ್​​ಗಳಾಗಿ ಪರಿವರ್ತಿಸಲಾಗಿದೆ.

ಓದಿ : ರಾಯಚೂರು ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ

ಕೋವಿಡ್​ ಸೋಂಕಿನ ಲಕ್ಷಣಗಳು ಕಂಡು ಬಂದಂತಹ ಯಾವುದೇ ವ್ಯಕ್ತಿಯಾದರೂ ಈ ರೈಲ್ವೆ ಐಸೋಲೇಶನ್ ಕೋಚ್​ಗೆ ತೆರಳಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬಹುದು.

ಒಂದು ಕೋಚ್​ನಲ್ಲಿ 16 ಸೋಂಕಿತರಿಗೆ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ವೆಂಟಿಲೇಟರ್​​, ಆಕ್ಸಿಜನ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಇಲಾಖೆ ಯೋಜಿಸಿದೆ.

ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಸರ್ಕಾರ ಮಾತ್ರ ರೈಲ್ವೆ ಕೋಚ್​ಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಕೇಳಿದ್ರೆ, ರೈಲ್ವೆ ಕೋಚ್​​ಗಳಲ್ಲಿ ಐಸೋಲೇಶನ್ ಮಾಡುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.