ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸರ್ಕಾರ ಗಂಡಸ್ತನ ತೋರಿಸಬೇಕು: ಮುತಾಲಿಕ್

ಮಸೀದಿ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕು. ಇದಕ್ಕೆ ಮೇ 9ರವರೆಗೆ ಕೊನೆಯ ಗಡುವು ನೀಡುತ್ತೇವೆ. ಮೈಕ್​ ತೆರವು ಮಾಡದಿದ್ದರೆ, ನಾವು ಹಿಂದೂ ದೇವಸ್ಥಾನಗಳ‌ ಮೈಕ್ ಹಚ್ಚುತ್ತೇನೆ ಎಂದೂ ಮುತಾಲಿಕ್ ಹೇಳಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
author img

By

Published : Apr 22, 2022, 3:24 PM IST

ಹುಬ್ಬಳ್ಳಿ: ಹಿಂದೂಗಳನ್ನು ಭಯಭೀತಗೊಳಿಸುವ ಉದ್ದೇಶದಿಂದ ಹುಬ್ಬಳ್ಳಿ ಗಲಭೆ ಸೃಷ್ಟಿಸಲಾಗಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಸರ್ಕಾರ ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು ಈ ಮೂಲಕ ಗಂಡಸ್ತನ ತೋರಿಸಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ‌ ಜರುಗಿಸದಿದ್ದರೆ ಹಿಂದೂಗಳು ಸುಮ್ಮನೆ ಕೂಡುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮತ್ತು ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ರಿಸ್ಕ್ ತೆಗೆದುಕೊಂಡು ಗಲಭೆ ನಿಯಂತ್ರಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ತಾಫ್ ಹಳ್ಳೂರು, ಅಲ್ತಾಫ್ ಕಿತ್ತೂರನ್ನು ಕೂಡ ಬಂಧಿಸಬೇಕು. ಇವರಿಬ್ಬರೂ ಗಲಭೆಗೆ ಕುಮ್ಮಕ್ಕು ನೀಡಿ ಈಗ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇವಸ್ಥಾನದ ಮೇಲಿನ ದಾಳಿ ಘಜ್ನಿ- ಘೋರಿ ಮನಸ್ಥಿತಿ ತೋರುತ್ತದೆ. ಗಲಭೆಗೆ ವಾಟ್ಸಪ್ ಸ್ಟೇಟಸ್ ಒಂದು ನೆಪ ಮಾತ್ರ. ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೆ ಏನಾಗುತ್ತದೆ. ಬೆಂಗಳೂರು‌ ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೇ?. ಕಾಶ್ಮೀರದಲ್ಲಿ ಮಾಡಿರುವ ಭಯ, ಭೀತಿಯನ್ನೇ ಇಲ್ಲಿ ಸೃಷ್ಟಿಸುವ ಹುನ್ನಾರ ಮಾಡಲಾಗಿದೆ ಎಂದು ಕಿಡಿಕಾರಿದರು.

ಮಸೀದಿ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕು. ಇದಕ್ಕೆ ಮೇ 9ರವರೆಗೆ ಕೊನೆಯ ಗಡುವು ನೀಡುತ್ತೇವೆ. ಮೈಕ್​ ತೆರವು ಮಾಡದಿದ್ದರೆ, ನಾವು ಹಿಂದೂ ದೇವಸ್ಥಾನಗಳ‌ ಮೈಕ್ ಹಚ್ಚುತ್ತೇನೆ. ಬೆಳಗ್ಗೆ 5 ಗಂಟೆಗೆ ಓಂಕಾರ, ಭಜನೆ, ಸುಪ್ರಭಾತ ಹೀಗೆ ಭಕ್ತಿ‌ಗೀತೆಗಳು ಮೊಳಗಲಿವೆ. ಮಸೀದಿಗಳಿಗೆ ನೆಪ ಮಾತ್ರಕ್ಕೆ ನೊಟೀಸ್ ನೀಡಿದೆ. ಇದು ಕಣ್ಣೊರೆಸುವ ತಂತ್ರವಾಗಿ ಎಂದು ಸರ್ಕಾರದ ವಿರದ್ದ ವಾಗ್ದಾಳಿ ‌ನಡೆಸಿದರು.

ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ಪೊಲೀಸ್ ಧಮ್ಕಿ ವಿಚಾರ: ದೂರು ಕೊಟ್ಟರೆ ಉನ್ನತ ತನಿಖೆ- ಸಿಎಂ ಬೊಮ್ಮಾಯಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.