ETV Bharat / state

ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು: ಬೊಮ್ಮಾಯಿ - ETV Bharath Karnataka

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಳೆ, ವಿದ್ಯುತ್​ ಮತ್ತು ಹಣದ ಕ್ಷಾಮ ತಲೆದೋರಿದೆ ಎಂದು ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

Former CM Basavaraj Bommai
ಮಾಜಿ ಸಿಎಂ ಬೊಮ್ಮಾಯಿ
author img

By ETV Bharat Karnataka Team

Published : Aug 25, 2023, 8:20 PM IST

'ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು'

ಹುಬ್ಬಳ್ಳಿ: ಮುಂಗಾರು ಜೂನ್ ತಿಂಗಳ ಕೊನೆಯವರೆಗೂ ಬರಲಿಲ್ಲ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ.‌ ಆಗಸ್ಟ್​ನಲ್ಲಿಯೂ ಮಳೆ ಆಗುತ್ತಿಲ್ಲ. ಸರ್ಕಾರ ಮೂರು ತಿಂಗಳಿಂದ ಬರಗಾಲ ಘೋಷಣೆ ಮಾಡಿಲ್ಲ. ಬೆಳೆ, ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡಿಲ್ಲ. ಕೂಡಲೇ ಬರಗಾಲ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಕೈಯಲ್ಲೂ ಹಣ ಇದೆ. ಆದರೆ ರಾಜ್ಯ ಸರ್ಕಾರ ಬರ ಎಂಬುದಾಗಿ ಘೋಷಣೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಕುಡಿಯುವ ನೀರು, ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರು ಕಡಿಮೆ ಆಗಿದೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಕ್ಷಾಮ ನೋಡಬೇಕಾಗುತ್ತದೆ. ಮುಂದಿನ ವರ್ಷ ಏಪ್ರಿಲ್,​ ಮೇ ವೇಳೆಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಲಿದೆ ಎಂದು ಹೇಳಿದರು.

ಜಲಾಶಯದಲ್ಲಿ ನೀರಿರದ ಕಾರಣ ವಿದ್ಯುತ್​ ಉತ್ಪಾದನೆ ಆಗುತ್ತಿಲ್ಲ. ಹೈಡ್ರೋಎಲೆಕ್ಟ್ರಿಕ್​ ಮತ್ತು ನಾಲ್ಕು ಥರ್ಮಲ್​ ಪ್ಲಾಂಟ್​ಗಳಲ್ಲಿ ವಿದ್ಯುತ್​ ಉತ್ಪಾದನೆ ಕಡಿಮೆ ಆಗಿದೆ. ಹೀಗಾಗಿ ಅನಧಿಕೃತವಾಗಿ ವಿದ್ಯುತ್​ ಕಡಿತ ಮಾಡಲಾಗುತ್ತಿದೆ. ರಾತ್ರಿ 12 ರಿಂದ 3 ಗಂಟೆಗೆ ಕರೆಂಟ್​ ಕೊಡುತ್ತಿದ್ದಾರೆ. ಬೇರೆ ಕಡೆ ಬೆಳಗ್ಗೆ 3 ರಿಂದ 6ಕ್ಕೆ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಆದರೆ ಸರ್ಕಾರ ಮಾತ್ರ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಮಳೆ, ವಿದ್ಯುತ್​ ಮತ್ತು ಹಣಕಾಸಿನ ಕ್ಷಾಮ ಉಂಟಾಗಿದೆ ಎಂದು ದೂರಿದರು.

ಕಾಂಗ್ರೆಸ್ ನಾಯಕರು ವರ್ಗಾವಣೆ ದಂಧೆ ಸೇರಿದಂತೆ ತಮ್ಮ ಹಿತಕ್ಕಾಗಿ ಬಡಿದಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ದಮನ ಮಾಡುವ ಕೆಲಸ ನಡೆದಿದೆ. ಎಂಎಲ್​ಎಗಳ ಪತ್ರ ಪ್ರಕಟ ಮಾಡಿದ ಪತ್ರಕರ್ತರಗೆ ನೊಟೀಸ್ ಕೊಡ್ತಾರೆ. ಪತ್ರಿಕಾ ಸ್ವಾತಂತ್ರ್ಯ ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಲೋಕಸಭೆಯಲ್ಲಿ ಬಿಜೆಪಿಗೆ ಹೆಚ್ಚಾಗಿ ಸೀಟ್ ಬರದೇ ಇದ್ದಲ್ಲಿ ಅದರ ಪರಿಣಾಮ ನೇರವಾಗಿ ರಾಜ್ಯ ಸರ್ಕಾರದ ಮೇಲೆ ಬೀಳುತ್ತೆ. ಹೀಗಾಗಿ ಆಪರೇಷನ್ ಹಸ್ತ ಮಾಡ್ತಾ ಇದ್ದಾರೆ. ಆದರೆ ಅವು ಯಾವುವೂ ಯಶಸ್ವಿ ಆಗಲ್ಲ. ಕೇಂದ್ರ ಚುನಾವಣೆಯ ಸಮೀಕ್ಷೆಯನ್ನು ನೋಡಿ ಕಾಂಗ್ರಸ್​ ಹೆದರಿದೆ ಎಂದು ಹೇಳಿದರು.

ಇದನ್ನೂ ಓದಿ: ಅಂಬಾನಿ-ಅದಾನಿ ಮಾತ್ರವಲ್ಲ, ಜನಸಾಮಾನ್ಯರ ಜೇಬಲ್ಲಿ ಹಣವಿದ್ದಲ್ಲಿ ಮಾತ್ರ ಆರ್ಥಿಕಾಭಿವೃದ್ಧಿ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.