ಹುಬ್ಬಳ್ಳಿ/ಬಳ್ಳಾರಿ: ದೇಶಾದ್ಯಂತ ಕೋವಿಡ್ ಎರಡನೇ ಅಲೆಯಾರ್ಭಟ ಜೋರಾಗಿದೆ. ಸೋಂಕಿತರಿಗೆ ಪೂರಕ ಚಿಕಿತ್ಸೆ ನೀಡಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಭಗೀರಥ ಪ್ರಯತ್ನ ಮಾಡ್ತಿವೆ.
ಕೊರೊನಾ ವಿರುದ್ಧದ ಸಮರಕ್ಕೆ ಹುಬ್ಬಳ್ಳಿಯ ಕಿಮ್ಸ್ ಸರ್ವ ಸನ್ನದ್ಧವಾಗಿದೆ. ಇಲ್ಲಿ ಸೋಂಕಿತರಿಗೆಂದೇ 100 ಐಸಿಯು ಬೆಡ್ ಹಾಗೂ 200 ಆಕ್ಸಿಜನ್ಯುಕ್ತ ಬೆಡ್ಗಳು ಮೀಸಲಾಗಿವೆ. ಜತೆಗೆ 70 ವೆಂಟಿಲೇಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದ್ರ ಜೊತೆಗೆ 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕವೂ ಇಲ್ಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಬೆಡ್ಗಳನ್ನು 500 ರಿಂದ 600 ರವರೆಗೆ ಹೆಚ್ಚಿಸುವ ಯೋಜನೆಯಿದೆ. ಸೋಂಕಿತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಇಲ್ಲಿನ ಉದ್ದೇಶ.
ಬಳ್ಳಾರಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ಗಳನ್ನು ಮಾಡಲಾಗಿದೆ. ರೋಗಿಗಳಿಗೆ ಅಗತ್ಯ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿರುವ 1,017 ಹಾಸಿಗೆಗಳ ಪೈಕಿ 180 ಐಸಿಯು ವಾರ್ಡ್ಗಳಾಗಿವೆ. ಹೋಂ ಐಸೊಲೇಷನ್ಗೆ ಹೆಚ್ಚು ಒತ್ತು ನೀಡಿದ್ದು, ಅಗತ್ಯವೆನಿಸಿದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗ್ತಿದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಬೇಕಿದೆ ಸುಸಜ್ಜಿತ ಆಟದ ಮೈದಾನಗಳ ವ್ಯವಸ್ಥೆ
ಕೋವಿಡ್ ಎರಡನೇ ಅಲೆ ನಿರ್ಮೂಲನೆ ಮಾಡಲು ಸರ್ಕಾರಿ ಆಸ್ಪತ್ರೆಗಳು ಅವಿರತವಾಗಿ ಶ್ರಮಿಸುತ್ತಿವೆ. ಆದ್ರೆ ಪ್ರಕರಣಗಳು ಹೆಚ್ಚಾಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹಾಗಾಗಿ ಕೊರೊನಾ ನಿಯಂತ್ರಿಸಲು ಸರ್ಕಾರದ ಜತೆ ಸಾರ್ವಜನಿಕರ ಸಹಕಾರವೂ ಅಗತ್ಯ.