ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ರಾಷ್ಟ್ರಧ್ವಜ ರಕ್ಷಣಾ ಅಭಿಯಾನ ನಡೆಯುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸ್ವಗೃಹಕ್ಕೆ ಭೇಟಿ ನೀಡಿದ ಇವರ ತಂಡ ರಾಷ್ಟ್ರಧ್ವಜ ಕಾಣಿಕೆ ನೀಡಿತು. ಈ ಸಂದರ್ಭದಲ್ಲಿ ಖಾದಿಯಿಂದ ತಯಾರಿಸಿದ ಧ್ವಜವನ್ನೇ ಮನೆಯ ಮೇಲೆ ಹಾರಿಸುವಂತೆಯೂ ಮನವಿ ಮಾಡಿದ್ದಾರೆ. ಈಗಾಗಲೇ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ ಇಂತಹ ನಿರ್ಧಾರದ ಮೂಲಕ ದೇಶೀಯತೆಗೆ ಹೊಡೆತ ಕೊಟ್ಟಿದೆ. ಕೇಂದ್ರದ ಈ ನೀತಿಯನ್ನು ಕೈಬಿಟ್ಟು ಖಾದಿ ಉಳಿವಿಗಾಗಿ ಕೈ ಜೋಡಿಸುವಂತೆ ಶೆಟ್ಟರ್ಗೆ ಉಳ್ಳಾಗಡ್ಡಿಮಠ ಮನವಿ ಮಾಡಿದರು.
ಇದನ್ನೂ ಓದಿ: ರಾಷ್ಟದ್ವಜ ಬಣ್ಣ ಕೆಂಪು, ಬಿಳಿ, ಹಸಿರು ಅಂದ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು