ETV Bharat / state

ವಾಣಿಜ್ಯ ನಗರಿಯಲ್ಲಿ ಗಾಂಜಾ ಘಮಲು: ಮತ್ತಿನಲ್ಲಿ ನಡೆಯುತ್ತಿದೆ ಹತ್ಯೆ - Hubli murder

ಹುಬ್ಬಳ್ಳಿ ನಗರದಲ್ಲಿ ಗಾಂಜಾ ಸೇವನೆ ಮಾಡುವ ದುಷ್ಕರ್ಮಿಗಳು ಕ್ರಿಮಿನಲ್​ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮೂವರನ್ನು ಕೊಲೆ ಮಾಡಿರುವ ಸಾಕ್ಷಿಯೂ ಕಣ್ಣ ಮುಂದಿದೆ.

ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿಸ ದುಷ್ಕರ್ಮಿಗಳು
ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿಸ ದುಷ್ಕರ್ಮಿಗಳು
author img

By

Published : Aug 30, 2020, 3:52 PM IST

​ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳ ಹಿಂದೆ ಗಾಂಜಾ ಘಾಟು ಕಂಡುಬಂದಿದೆ.

ಪ್ರಕರಣ-1

ಇತ್ತೀಚೆಗೆ ದೇಶಪಾಂಡೆ ನಗರದ ಯುವಕರ ಗುಂಪೊಂದು ಭವಾನಿ ನಗರ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿತ್ತು. ಈ ಘಟನೆ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು. ಅಷ್ಟೇ ಅಲ್ಲದೆ, ಆರೋಪಿಗಳು ಕೊಲೆ ನಡೆಸಿದ್ದ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿದ್ದರು ಎಂದು ವಿಚಾರ ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣ-2

ಗೊಪ್ಪನಕೊಪ್ಪದ ಜೋಡಿ ಕೊಲೆ ಪ್ರಕರಣದ ಆರೋಪಿಗಳು ಕೂಡ ಗಾಂಜಾ ಮತ್ತಿನಲ್ಲಿಯೇ ಯುವಕರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.‌ ಅವಳಿ ನಗರದ ಬಹುತೇಕ ಅಪರಾಧ ಕೃತ್ಯಗಳಿಗೆ ಗಾಂಜಾ ಅಮಲು ಮೆತ್ತಿಕೊಂಡಿದೆ.

ಜನರ ಅತಂಕವೇನು?

ಅವಳಿ ನಗರದಲ್ಲಿ ಗಾಂಜಾ‌ ಮಾರಾಟ ಜಾಲ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದನ್ನು ಇವೆರಡು‌ ಪ್ರಕರಣಗಳಿಂದ ತಿಳಿಯಬಹುದು. ಪೊಲೀಸ್ ಇಲಾಖೆ ಅಕ್ರಮ ಗಾಂಜಾ ಜಾಲಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲವಾದ್ರೆ ಅವಳಿ‌ ನಗರ ಗಾಂಜಾ ನಗರವಾಗಲಿದೆ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.