ETV Bharat / state

ಫ್ರುಟ್​ ಇರ್ಫಾನ್ ಶೂಟೌಟ್ ಪ್ರಕರಣ: ಕೋರ್ಟ್​ಗೆ ಹಾಜರಾದ ಹ್ಯಾರಿಸ್ ಪಠಾಣ್​..! - ಫ್ರೂಟ್ ಇರ್ಫಾನ್ ಕೊಲೆ

ಫ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳನನ್ನು ಶೂಟ್​ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದ ಆರೋಪಿ ಧಾರವಾಡದ ಹ್ಯಾರಿಸ್ ಪಠಾಣ್​ ತಲೆಮರೆಸಿಕೊಂಡಿದ್ದ. ಇಂದು ಹುಬ್ಬಳ್ಳಿಯ 4ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

fruit-irfan-shootout-case-harris-pathan-arrested
ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣ
author img

By

Published : Apr 19, 2021, 7:33 PM IST

ಹುಬ್ಬಳ್ಳಿ: ಫ್ರುಟ್​ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎಂಟೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಹ್ಯಾರಿಸ್ ಪಠಾಣ್​ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಕಳೆದ ವರ್ಷ ಆಗಸ್ಟ್ 6ರಂದು ಹಳೇ ಹುಬ್ಬಳ್ಳಿಯ ಹೊಟೇಲ್ ಮುಂಭಾಗದಲ್ಲಿ ಫ್ರುಟ್​ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳನನ್ನು ಶೂಟ್​ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದ ಆರೋಪಿ ಧಾರವಾಡದ ಹ್ಯಾರಿಸ್ ಪಠಾಣ್​ ತಲೆಮರೆಸಿಕೊಂಡಿದ್ದ. ಇಂದು ಹುಬ್ಬಳ್ಳಿಯ 4ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

ಈ ಹಿಂದೆ ಹೈಕೋರ್ಟ್​​​​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಹ್ಯಾರಿಸ್ ಜಾಮೀನು ಸಿಗದ ಹಿನ್ನೆಲೆ ಶರಣಾಗಿದ್ದಾನೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.