ETV Bharat / state

ಮುಂದಿನ ವರ್ಷವೂ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇರಲಿ : ಕೇಂದ್ರ ಸಚಿವ ಜೋಶಿ

ಪಾದಯಾತ್ರೆ ಮಾಡಿದರೇ ಸಿಎಂ ಆಗುತ್ತೆನೆಂದು ಡಿ.ಕೆ.ಶಿವಕುಮಾರ್ ಭ್ರಮೆಯಲ್ಲಿದ್ದಾರೆ. ಈ ಪಾದಯಾತ್ರೆಯಿಂದ ಡಿ.ಕೆ. ಶಿವಕುಮಾರ್ ಸಿಎಂ ಆಗಲ್ಲ ಬೇಕಾದರೆ ವಿರೋಧ ಪಕ್ಷದ ನಾಯಕನಾಗಬಹುದು..

author img

By

Published : Feb 27, 2022, 3:17 PM IST

Union Minister Prahlada Joshi
ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಮೇಕೆದಾಟು ಪಾದಯಾತ್ರೆ ಅಂತಹುದೇ ರೀತಿಯ ಧರಣಿ, ಸತ್ಯಾಗ್ರಹ ಮಾಡುವ ಪರಿಸ್ಥಿತಿ ಮುಂದೆಯೂ ದೇವರು ಅವರಿಗೆ ಕೊಡಲಿ. ಅವರು ಇನ್ನೂ ಮುಂದಿನ ವರ್ಷಗಳಲ್ಲಿ ವಿರೋಧ ಪಕ್ಷದಲ್ಲಿ ಇರುವಂತಾಗಿಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಮುಂದಿನ ವರ್ಷವೂ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇರಲಿ : ಕೇಂದ್ರ ಸಚಿವ ಜೋಶಿ

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಾದಾಯಿ ಪಾದಯಾತ್ರೆ ಮಾಡುವ ಉದ್ದೇಶ ಕಾಂಗ್ರೆಸ್‌ ಪಕ್ಷಕ್ಕೆ ಇದೆ. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್ಎದಲ್ಲಿ ಬಂದಿದೆ.

ಪಾದಯಾತ್ರೆ ಮಾಡಿದರೇ ಸಿಎಂ ಆಗುತ್ತೇನೆಂದು ಡಿ.ಕೆ.ಶಿವಕುಮಾರ್ ಭ್ರಮೆಯಲ್ಲಿದ್ದಾರೆ. ಈ ಪಾದಯಾತ್ರೆಯಿಂದ ಡಿ.ಕೆ. ಶಿವಕುಮಾರ್ ಸಿಎಂ ಆಗಲ್ಲ, ಬೇಕಾದರೆ ವಿರೋಧ ಪಕ್ಷದ ನಾಯಕನಾಗಬಹುದು ಎಂದು ಲೇವಡಿ ಮಾಡಿದರು.

ಎಸ್‌ಡಿಪಿಐ ಬ್ಯಾನ್ ಮಾಡುವ ವಿಚಾರಕ್ಕೆ ನನ್ನ ಬೆಂಬಲವಿದೆ. ಬ್ಯಾನ್ ಮಾಡಲು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಉಕ್ರೇನ್ ಯುದ್ಧದ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಉಕ್ರೇನ್ ಪರಿಸ್ಥಿತಿ ಸೂಕ್ಷ್ಮತೆಯಿದೆ. ಈಗಾಗಲೇ ಎರಡು ದೊಡ್ಡ ವಿಮಾನಗಳು ಬಂದಿವೆ. ಇಂದು ಮತ್ತೆ ಎರಡು ವಿಮಾನ ಹೋಗುತ್ತವೆ. ರಷ್ಯಾ ಅಧ್ಯಕ್ಷ ಜೊತೆಗೆ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ.

ಉಕ್ರೇನ್ ಅಕ್ಕ-ಪಕ್ಕದ ಸುರಕ್ಷಿತ ದೇಶಗಳಲ್ಲಿ ನಮ್ಮ ದೇಶದ ನಾಗರಿಕರನ್ನು ಕರೆತಂದು ಅಲ್ಲಿಂದ ನಮ್ಮ ದೇಶಕ್ಕೆ ಕರೆಯಲಾಗುತ್ತದೆ. ನಮ್ಮ ರಾಜ್ಯದ 16 ಜನ ಸುರಕ್ಷಿತವಾಗಿ ತಲುಪಿದ್ದಾರೆ. ಭಾರತದ ಮನವಿಯನ್ನು ಯಾರು ತಿರಸ್ಕಾರ ಮಾಡಿಲ್ಲ. ಇದೆಲ್ಲವನ್ನು ಉಚಿತವಾಗಿ ಮಾಡುತ್ತಿದ್ದೇವೆ ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್ ಕೇವಲ ಪ್ರಚಾರ, ವೋಟ್ ಬ್ಯಾಂಕ್​ಗಾಗಿ ಪಾದಯಾತ್ರೆ ಮಾಡುತ್ತಿದೆ : ಮಾಜಿ ಸಿಎಂ ಶೆಟ್ಟರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.