ETV Bharat / state

ಗಾಂಜಾ ಮಾರಾಟ ಆರೋಪ: ನಾಲ್ವರ ಬಂಧನ - ಹುಬ್ಬಳ್ಳಿ ಅಕ್ರಮವಾಗಿ ಗಾಂಜಾ ಸಾಗಾಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ‌ಅಕ್ರಮ ಗಾಂಜಾ ಮಾರಾಟಗಾರರ ಬೇಟೆ ಮುಂದುವರೆದಿದೆ. ಮತ್ತೆ ನಾಲ್ವರನ್ನು ಹುಬ್ಬಳ್ಳಿಯ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Arrest
Arrest
author img

By

Published : Sep 10, 2020, 12:11 PM IST

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನು ಹುಬ್ಬಳ್ಳಿಯ ಶಹರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 435 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ರಾಜಗೋಪಾಲ ನಗರದ ಅಲ್ತಾಫ ನಧಾಪ್ (38), ಬಮ್ಮಾಪೂರ ಓಣಿಯ ನಿಂಗಪ್ಪ ಚಿಕ್ಕೋಪ್ಪ ( 25), ಮೌಲಾಲಿ ಬ್ಲಾಕ ಶ್ರೀರಾಮ ಮಂದಿರದ ಹತ್ತಿರ‌ದ ನಿವಾಸಿ ವಾಸೀಮ ಶೇಖ (28), ಮಿಲ್ಲತ ನಗರದ ರೋಹನ ಹಬೀಬ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳು ಬೇರೆ ಬೇರೆ ಕೆಲಸದ ಜೊತೆ ಅಕ್ರಮವಾಗಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಅಧಿಕಾರಿ ಪಾಟೀಲ್ ಹಾಗೂ ಇನ್ನುಳಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.