ಹುಬ್ಬಳ್ಳಿ: ಓವರ್‌ಟೇಕ್ ಮಾಡಲು ಹೋಗಿ ಮುಂದೆ ಬಂದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿ ನಡೆದಿದೆ.
![people injured in car accident at Hubli, Hubli accident news, Car collied with truck in Hubli, ಹುಬ್ಬಳ್ಳಿಯಲ್ಲಿ ಕಾರು ಅಪಘಾತದಲ್ಲಿ ಜನರಿಗೆ ಗಾಯ, ಹುಬ್ಬಳ್ಳಿ ಅಪಘಾತ ಸುದ್ದಿ, ಹುಬ್ಬಳ್ಳಿಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ಕಾರು,](https://etvbharatimages.akamaized.net/etvbharat/prod-images/kn-hbl-03-accident-av-7208089_18032022102347_1803f_1647579227_394.jpg)
ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಹೋಳಿ ಹಬ್ಬದ ನಿಮಿತ್ತ ಕಾರಿನಲ್ಲಿದ್ದವರು ನವಲಗುಂದ ಕಾಮಣ್ಣನನಿಗೆ ವಿಶೇಷ ಪೂಜೆ ಸಲ್ಲಿಸಿ ಮರಳುತ್ತಿದ್ದರು. ಆಗ ಮುಂದಿರುವ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
![people injured in car accident at Hubli, Hubli accident news, Car collied with truck in Hubli, ಹುಬ್ಬಳ್ಳಿಯಲ್ಲಿ ಕಾರು ಅಪಘಾತದಲ್ಲಿ ಜನರಿಗೆ ಗಾಯ, ಹುಬ್ಬಳ್ಳಿ ಅಪಘಾತ ಸುದ್ದಿ, ಹುಬ್ಬಳ್ಳಿಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದ ಕಾರು,](https://etvbharatimages.akamaized.net/etvbharat/prod-images/kn-hbl-03-accident-av-7208089_18032022102347_1803f_1647579227_698.jpg)
ಓದಿ: ಸುಟ್ಟಗಾಯ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ 2021ರ ವಿಶ್ವಸುಂದರಿ ಸ್ಪರ್ಧೆ ರನ್ನರ್ ಅಪ್!
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು, ಕಿಮ್ಸ್ಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಹೆಸರು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೂರ್ವ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.