ETV Bharat / state

ಬಿಜೆಪಿ ಪಕ್ಷಕ್ಕೆ ಮತ್ತಿಬ್ಬರ ರಾಜೀನಾಮೆ; ಚಿಕ್ಕನಗೌಡ್ರ ಪಕ್ಷೇತರರಾಗಿ ನಿಂತರೆ, ಕಲಬುರ್ಗಿ ನಾಗೇಶ ಕಾಂಗ್ರೆಸ್​ ಸೇರ್ಪಡೆ ಸಂದೇಶ.. - ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ

ಟಿಕೆಟ್​ ವಂಚಿತ ಎಸ್ ಐ ಚಿಕ್ಕನಗೌಡ್ರ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲದೇ ಕೆಲವೇ ಗಂಟೆಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

resign
ರಾಜೀನಾಮೆ ನೀಡುತ್ತಿರುವ ಚಿಕ್ಕನಗೌಡ್ರ
author img

By

Published : Apr 17, 2023, 1:09 PM IST

Updated : Apr 17, 2023, 3:30 PM IST

ನಾಮಪತ್ರ ಸಲ್ಲಿಸುತ್ತಿರುವ ಎಸ್ ಐ ಚಿಕ್ಕನಗೌಡ್ರ

ಹುಬ್ಬಳ್ಳಿ-(ಧಾರವಾಡ): ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್ ಐ ಚಿಕ್ಕನಗೌಡ್ರ ಇಂದು ತಮ್ಮ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್ ಐ ಚಿಕ್ಕನಗೌಡ್ರ ಅವರಿಗೆ ಟಿಕೆಟ್ ಕೈ ತಪ್ಪಿರುವುದು ಈ ರಾಜೀನಾಮೆಗೆ ಕಾರಣವಾಗಿದೆ.

ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರ ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್​ ಇವರಿಗೆ ಸಿಗುವ ಬದಲು ಎಂ ಆರ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಅವರು ರಾಜೀನಾಮೆ ನೀಡಿದ್ದಾರೆ.

resigns
ರಾಜೀನಾಮೆ ಪ್ರತಿ

ಈ ಬಗ್ಗೆ ಅಧಿಕೃತವಾಗಿ ತಿಳಿಸಿರುವ ಅವರು, ಬಿಜೆಪಿಯಲ್ಲಿ ಕಳೆದ 4 ವರ್ಷಗಳಿಂದ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಕಟ್ಟಿ ಬೆಳೆಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಶಾಸಕತ್ವದವರೆಗೆ ನನ್ನ ಪ್ರಾಮಾಣಿಕ ಶ್ರಮದ ಬಗ್ಗೆ ತೃಪ್ತಿ ಇದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಹಲವಾರು ಬೆಳವಣಿಗೆಗಳಿಂದ ಮನಸ್ಸಿಗೆ ತೀವ್ರ ನೋವಾಗಿದ್ದು, ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸ್ವ ಇಚ್ಛೆಯಿಂದ ರಾಜಿನಾಮೆ ಸಲ್ಲಿಸಿದ್ದಾಗಿ ಉಲ್ಲೇಖಿಸಿದ್ದಾರೆ.

ಅದರ ಜೊತೆಗೆ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ತಹಶಿಲ್ದಾರರ ಕಚೇರಿಯಲ್ಲಿನ ಚುನಾವಣಾಧಿಕಾರಿಗೆ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಗೇಶ ಕಲಬುರ್ಗಿ

ಶೆಟ್ಟರ್​ ಕಟ್ಟಾ ಅಭಿಮಾನಿ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ರಾಜೀನಾಮೆ: ರಾಜ್ಯ ಕಂಡಂತಹ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ನಿಟ್ಟಿನಲ್ಲಿ ನಾನು ಕೂಡಾ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನೀಡಿದ ಜವಾಬ್ದಾರಿಗಳನ್ನು ನಾನು ನಿಭಾಯಿಸಿದ್ದೇನೆ. ಪಕ್ಷಕೆ ನಾವು ಕೊಟ್ಟಂತಹ ಕೊಡುಗೆ ಹಾಗೂ ಪಕ್ಷಕ್ಕಾಗಿ ಕೆಲಸಗಳನ್ನು ಮಾಡಿದರೂ ಸಹಿತ ನಮ್ಮನ್ನು ಕಡೆಗಣನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಇದೀಗ ಕೆಲವೇ ಕೆಲವು ಜನರಲ್ಲಿ ಕೈ ಮುಷ್ಠಿಯಲ್ಲಿ ಪಕ್ಷ ಹಿಡಿತದಲ್ಲಿದೆ. ಆದ್ದರಿಂದ ಬಹಳ ಜನರಿಗೆ ಅನ್ಯಾಯವಾಗುತ್ತಿದೆ ಹಾಗೂ ಪಕ್ಷದಲ್ಲಿರುವ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದ್ದು, ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದರು. ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವ್ಯಾಟ್ಸ್ಆ್ಯಪ್ ಮೂಲಕ ರವಾನೆ ಮಾಡಿದ್ದೆನೆಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಬಿಜೆಪಿ ಪಕ್ಷಕ್ಕೆ ರಾಜೀನಾಮೆ, ಮತ್ತು ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಬಿಜೆಪಿ ಪಕ್ಷದ ಮಾಜಿ ಶಾಸಕ​ ಎಸ್.ಐ.ಚಿಕ್ಕನಗೌಡ್ರ ಹಾಗು ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಕೂಡ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದು ಬಿಜೆಪಿಗೆ ಮತ್ತೆ ಹೊಡೆತ ಬಿದ್ದಂತಾಗಿದೆ. ಈ ಬಾರಿಯ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲಿ ಹೊಸ ಬದಲಾವಣೆ ತಂದಿರುವುದೇ ಇದಕ್ಕೆ ಕಾರಣವಾಗಿ ತೋರುತ್ತಿದೆ.

ಇದರ ನಡುವೆಯೂ ಬಿಜೆಪಿ ತನಗೇನು ನಷ್ಟ ಇಲ್ಲ ಎಂಬಂತೆ ಚುನಾವಣೆಗೆ ಬಿರುಸಿನ ಪ್ರಚಾರ ಮತ್ತು ಹೊಸ ಹೊಸ ತಂತ್ರವನ್ನು ರೂಪಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್​ ತಮ್ಮ ಪಕ್ಷಕ್ಕೆ ವಿರೋಧ ಪಕ್ಷದ ಘಟಾನುಘಟಿ ನಾಯಕರಿಬ್ಬರ ಸೇರ್ಪಡೆಯಿಂದ ಮತ್ತಷ್ಟು ಗಟ್ಟಿಯಾದಂತಿದೆ. ಈ ಎರಡೂ ಪಕ್ಷದ ನಡುವೇ ಜೆಡಿಎಸ್​ ಪಕ್ಷ ಈ ಬಾರಿ ಚುನಾವಣೆಯಲ್ಲಿ ಗೆಲುವಿನ ನಗಾರಿ ಭಾರಿಸಲು ಭಾರಿ ಶ್ರಮವಹಿಸುತ್ತಿದೆ.

ಇದನ್ನೂ ಓದಿ: ಜನಗಣತಿ ನಡೆಸಿ, ಜಾತಿ ಆಧಾರಿತ ವರದಿ ಬಿಡುಗಡೆಗಾಗಿ ಪ್ರಧಾನಿಗೆ ಮಲ್ಲಿಕಾರ್ಜುನ್​ ಖರ್ಗೆ ಪತ್ರ

Last Updated : Apr 17, 2023, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.