ETV Bharat / state

ವಾಣಿಜ್ಯನಗರಿಯಲ್ಲಿ ಪಾಲಿಕೆ ಕಾರ್ಯಾಚರಣೆ : ಅತಿಕ್ರಮಣ ಗೂಡಂಗಡಿಗಳ ತೆರವು - ಅತಿಕ್ರಮಣ ಪುಟ್​​ಪಾತ್ ತೆರವು ಸುದ್ದಿ

ರಸ್ತೆ, ಫುಟ್‌ಪಾತ್, ಪಾರ್ಕಿಂಗ್ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ ಅಧಿಕಾರಿಗಳು, ಡಬ್ಬಿ ಅಂಗಡಿ, ತಳ್ಳುಬಂಡಿ, ಚಾಟ್ ಸೆಂಟರ್‌ಗಳನ್ನು ತೆರವು ಮಾಡಿದರು..

hubli
ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ
author img

By

Published : Dec 29, 2020, 2:19 PM IST

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಚುರುಕಾಗಿ ನಡೆದಿದೆ. ಬೆಳ್ಳಂಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿದರು.

ತೆರವು ಕಾರ್ಯಾಚರಣೆ
ಹುಬ್ಬಳ್ಳಿಯ ಮಧುರಾ ಕಾಲೋನಿ, ರಮೇಶ್ ಭವನ ರಸ್ತೆ, ಶಾಹ್‌ ಬಜಾರ್‌ನಲ್ಲಿ ಅತಿಕ್ರಮಣ ತೆರವು ಮಾಡಲಾಯಿತು. ರಸ್ತೆ, ಫುಟ್‌ಪಾತ್, ಪಾರ್ಕಿಂಗ್ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ ಅಧಿಕಾರಿಗಳು, ಡಬ್ಬಿ ಅಂಗಡಿ, ತಳ್ಳುಬಂಡಿ, ಚಾಟ್ ಸೆಂಟರ್‌ಗಳನ್ನು ತೆರವು ಮಾಡಿದರು.
ಹಲವು ವರ್ಷಗಳಿಂದ ಫುಟ್​ಪಾತ್ ಹಾಗೂ ಪಾರ್ಕಿಂಗ್ ಜಾಗವನ್ನು ಅತಿಕ್ರಮಣಗೊಳಿಸಿದ ಹಿನ್ನೆಲೆ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ಕಾರಣಕ್ಕೆ ಜಿಲ್ಲಾಧಿಕಾರಿ ಆದೇಶ ಮೇರೆಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಿದರು.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯ ವಿಧೇಯಕಕ್ಕೆ ಮಧ್ಯಪ್ರದೇಶ ಸಂಪುಟ ಅಸ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.