ಹುಬ್ಬಳ್ಳಿ : ನಗರ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಹಾಗೂ ಗೆಳೆಯರ ಬಳಗದಿಂದ ಬಡ ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ನಗರದ ಬೈರಿದೇವರಕೊಪ್ಪ ಸೇರಿದಂತೆ ವಿವಿಧ ಬಡಾವಣೆಗಳ ಬಡ ಕುಟುಂಬಗಳಿಗೆ 1,200 ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಕುಮಾರ ಕೊಪ್ಪದ, ರಾಮಚಂದ್ರ ಹದಗಲ್, ನಿಂಗಣ್ಣಾ ಕುರುಬರ, ಸಹದೇವ ಹೊಡಗಿ, ಹನುಮಂತ ಅಂಬಿಗೇರ, ನಂದು ಗುಂಡೂರ, ಬಸವರಾಜ ಕುರಬಗಟ್ಟಿ ಇದ್ದರು.